ಸಾಲದ ಕಂತುಗಳ ಪಾವತಿ; ಮತ್ತೆ ಮೂರು ತಿಂಗಳು ವಿನಾಯ್ತಿ..!

ಲಾಕ್‍ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ಸಾಲಗಾರರಿಗೆ ಆರ್‍ಬಿಐ ಮತ್ತೆ ಬಿಗ್ ರಿಲೀಫ್ ನೀಡಿದೆ. ಅವಧಿ ಸಾಲಗಳ ಕಂತು, ಅವಧಿ ಸಾಲಗಳ ಮೇಲಿನ ಬಡ್ಡಿಯನ್ನು ಕಟ್ಟುವುದರಿಂದ ಈಗಾಗಲೇ ಇರುವ ವಿನಾಯ್ತಿಯನ್ನು ಮತ್ತೆ ಮೂರು ತಿಂಗಳ ಕಾಲ ವಿಸ್ತರಿಸಿ ಆರ್‍ಬಿಐ ಮಹತ್ವದ ಆದೇಶ ಹೊರಡಿಸಿದೆ. ಜೂನ್ 1ರಿಂದ ಆಗಸ್ಟ್ 31ರವರೆಗೂ ಈ ಆದೇಶ ಅನ್ವಯ ಆಗುತ್ತದೆ.

ಅಂದರೆ ಸದ್ಯಕ್ಕೆ ಕಂತು ಪಾವತಿಯಿಂದ ಮಾತ್ರ ವಿನಾಯ್ತಿ ಸಿಗುತ್ತದೆ. ಆದರೆ, ಅಕ್ಟೋಬರ್ 1ರ ನಂತರ ನೀವು ಉಳಿಸಿಕೊಂಡ ಕಂತುಗಳ ಮೊತ್ತಕ್ಕೆ ಬಡ್ಡಿಯನ್ನು ಸೇರಿಸಿ ಕಟ್ಟಬೇಕಾಗುತ್ತದೆ.

ಈ ಹಿಂದೆ, ಮಾರ್ಚ್ 1ರಿಂದ ಮೇ 31ರವರೆಗೂ ಸಾಲದ ಮೇಲಿನ ಬಡ್ಡಿಯನ್ನು ಕಟ್ಟುವ ಅಗತ್ಯವಿಲ್ಲ ಎಂದು ಆರ್‍ಬಿಐ ತಿಳಿಸಿತ್ತು. ಇದೇ ಅದೇ ಮಾರ್ಗಸೂಚಿಯ ನಿಯಮಗಳೇ ಇಲ್ಲಿಗೂ ಅನ್ವಯ ಆಗಲಿವೆ.

ಹೆಚ್ಚಿನ ಮಾಹಿತಿಗೆ.. ಇದನ್ನು ಓದಿ

ಮೂರು ತಿಂಗಳು ಸಾಲ ಕಟ್ಬೇಕಾ..? ಬೇಡ್ವಾ..? ಯಾವುದರಿಂದ ಲಾಭ..? ಸಂಪೂರ್ಣ ಓದಿದ ಮೇಲೆ ನೀವೇ ಡಿಸೈಡ್‌ ಮಾಡಿ

LEAVE A REPLY

Please enter your comment!
Please enter your name here