ಸಾಮಾಜಿಕ ಜಾಲತಾಣವನ್ನು ಬಳಸಿಕೊಂಡು ಸದ್ದಿಲ್ಲದೆ ಸಮಾಜಸೇವೆ ಮಾಡುತ್ತಿರುವ ಶುಭದ ರಾವ್

ಸಾಮಾಜಿಕ ಜಾಲತಾಣವನ್ನು  ಉಪಯೋಗಿಸಿಕೊಂಡು ಬಡವರ ಪಾಲಿಗೆ ವರದಾನವಾಗಬಹುದು ಎಂದು ಸಾಧಿಸಿ ತೋರಿಸಿದ್ದಾರೆ ಕಾರ್ಕಳದ ಶುಭದ್ ರಾವ್ ರವರು.

ಹೌದು ಈ ಒಂದು ವಿನೂತನವಾದ ಪ್ರಯತ್ನವೊಂದನ್ನು ಮಾಡಿರುವವರು ಕಾರ್ಕಳದ ಪುರಸಭಾ ಸದಸ್ಯ ಶುಭದ ರಾವ್. ಸಾಮಾಜಿಕ ಜಾಲತಾಣವನ್ನು ಉಪಯೋಗಿಸಿಕೊಂಡು ಎರಡು ಲಕ್ಷ ರೂ. ಮೌಲ್ಯದ ಕಿಟ್ ಅನ್ನು 150 ಕ್ಕೂ ಹೆಚ್ಚಿನ ಮನೆಗಳಿಗೆ ವಿತರಿಸಿದ್ದಾರೆ.

ಪ್ರತೀ ಕಿಟ್ ನಲ್ಲಿ ದಿನಬಳಕೆಗೆ ಬೇಕಾಗುವ ಅಗತ್ಯ ವಸ್ತುಗಳಿದ್ದು ಒಂದು ಕಿಟ್ ನ ಬೆಲೆ 1500 ರಿಂದ ‌2000 ರೂ ಆಗಿರುತ್ತದೆ.

ಅದಲ್ಲದೆ ಗದಗ, ಗಂಗಾವತಿ, ಶಿವಮೊಗ್ಗ, ಹುಬ್ಬಳ್ಳಿ, ಕೊಪ್ಪಳ ಮೊದಲಾದ ಜಿಲ್ಲೆಯಿಂದ ಬಂದ ವಲಸೆ ಕಾರ್ಮಿಕ ಕುಟುಂಬಕ್ಕೂ ಕಿಟ್ ವಿತರಿಸಲಾಗಿದೆ.ರೆಂಜಾಳ ಮತ್ತು ಸಾಣೂರು ಗ್ರಾಮದ ಎರಡು ಮನೆಗೆ ಕಿಟ್ ಜೊತೆಗೆ ಜೌಷದಿ ಅಗತ್ಯ ಜೌಷಧಿಯನ್ನು ಪೂರೈಸಲಾಗಿದೆ.

ಸಾಮಾಜಿಕ ಜಾಲತಾಣದಲ್ಲಿರುವ ಸ್ನೇಹಿತರ ಬಳಗದವರ ಬಳಿ ಸಹಾಯ ಚಾಚಿದಾಗ ಪರಿಚಿತರು ಮಾತ್ರವಲ್ಲದೆ ದೂರದೂರದ  ಜನರಿಂದಲೂ ಉತ್ತಮ ಬೆಂಬಲ ಸಿಕ್ಕಿದೆ. ಬಡವರಿಗಾಗಿ ನೊಂದವರಿಗಾಗಿ ದುಡಿಯುವವರಿಗೆ ಜನರ ಬೆಂಬಲ ಸದಾ ಇರುತ್ತದೆ ಮತ್ತು ಸಾಮಾಜಿಕ ಜಾಲತಾಣವನ್ನು ಸದುದ್ದೇಶದಿಂದ ಬಳಸಿಕೊಳ್ಳಬಹುದು ಎಂದು ಶುಭದ್ ರಾವ್ ನಿರೂಪಿಸಿದ್ದಾರೆ.

“ಎಲ್ಲರೂ ಸಾಮಾಜಿಕ ಜಾಲತಾಣವನ್ನು ತಮ್ಮ ಸ್ವಂತಕ್ಕಾಗಿ ಸ್ವಾರ್ಥಕ್ಕಾಗಿ ಬಳಸುತ್ತಿದ್ದಾರೆ ಆದರೆ ನಾನು ಇದರಿಂದಲೇ ಜನರಿಗೆ ಉಪಕಾರವಾಗುವಂತಹ ಏನಾದರೂ ಕೆಲಸ ಮಾಡೋಣ ಅಂದುಕೊಂಡೆ, ಆದರೆ ನನ್ನ ನಿರೀಕ್ಷೆಗೂ ಮೀರಿ ಉತ್ತಮ ಬೆಂಬಲ ದೊರೆತಿದೆ. ಇದು ನನಗೆ ಮತ್ತಷ್ಟು ಕೆಲಸ ಮಾಡಲು ಸ್ಪೂರ್ತಿಯಾಗಿದೆ. ಇನ್ನೂ ಸಾಧ್ಯವಾದಷ್ಟು ಜನರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಕೆಲಸ ಮಾಡುತ್ತೇನೆ.

ಪ್ರತೀ ದಿನ ದಾನಿಗಳ ಹೆಸರು ಮತ್ತು ಭಾವಚಿತ್ರವನ್ನು ಅದೇ ಜಾಲತಾಣದಲ್ಲಿ ಪ್ರಕಟಿಸಲಾಗುತ್ತಿದೆ. ಆದರೆ ಇದು ಯಾವುದೇ ಪ್ರಚಾರಕ್ಕಾಗಿ ಅಲ್ಲ ಇನ್ನೊಬ್ಬರಿಗೆ ಪ್ರೇರಣೆಗಾಗಿ ಎನ್ನುತ್ತಾರೆ ಶುಭದ್ ರಾವ್ ರವರು.

LEAVE A REPLY

Please enter your comment!
Please enter your name here