ಸಾಮಾಜಿಕ ಅಂತರ ಪಾಲಿಸದ ಹಿನ್ನೆಲೆ – ಲಾಕ್‌‌ಡೌನ್‌ ಸಡಿಲಿಕೆ ವಾಪಸ್‌ – ಜಿಲ್ಲಾಧಿಕಾರಿ ಆದೇಶ

ಜಿಲ್ಲೆಯಲ್ಲಿ ಕೊರೋನಾ ಕೇಸ್‌ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕಲ್ಬುರ್ಗಿ ಜಿಲ್ಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆಯನ್ನು ಹಿಂಪಡೆದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಸಾಮಾಜಿಕ ಅಂತರ ಕಾಪಾಡದ ಹಿನ್ನೆಲೆಯಲ್ಲಿ ಬುಧವಾರ ಕೆಲವೊಂದು ವಾಣಿಜ್ಯ ಮಳಿಗೆಗಳಿಗೆ ನೀಡಲಾಗಿದ್ದ ಅನುಮತಿಯನ್ನು ಹಿಂಪಡೆದಿರುವುದಾಗಿ ಜಿಲ್ಲಾಧಿಕಾರಿ ಶರತ್‌ ಬಿ ಆದೇಶದಲ್ಲಿ ತಿಳಿಸಿದ್ದಾರೆ.

ಈ ಮೂಲಕ ಜಿಲ್ಲೆಯಲ್ಲಿ ಬಟ್ಟೆ ಅಂಗಡಿ, ಚಿನ್ನಾಭರಣ ಅಂಗಡಿ, ಮೊಬೈಲ್‌ ಶಾಪ್‌, ಬೇಕರಿ, ಬುಕ್‌ ಶಾಪ್‌, ಹಾರ್ಡ್‌ವೇರ್‌ ಮತ್ತು ಸಾಫ್ಟ್‌ವೇರ್‌ ಮತ್ತು ಅಟೋಮೊಬೈಲ್‌ ಅಂಗಡಿಗಳಿಗೆ ನೀಡಲಾಗಿದ್ದ ಸಡಿಲಿಕೆಯನ್ನು ವಾಪಸ್‌ ಪಡೆದಿದ್ದಾರೆ.

ಜಿಲ್ಲೆಯಲ್ಲಿ ೬೭ ಕೊರೋನಾ ಪಾಸಿಟಿವ್‌ ಕೇಸ್‌ ಇದ್ದು, ಇನ್ನೂ ೧೨೪ ಮಂದಿಯ ವರದಿ ಬರಬೇಕಿದೆ. ಜಿಲ್ಲೆಯಲ್ಲಿ ಕೊರೋನಾ ಸೋಂಕಿರುವ ೨೨ ಕಂಟೈನ್‌ಮೆಂಟ್‌ಝೋನ್‌ಗಳಿವೆ.

LEAVE A REPLY

Please enter your comment!
Please enter your name here