ಸರ್ಕಾರಿ ನೌಕರರಿಗೆ ಪೂರ್ಣ ಸಂಬಳ, ಪಿಂಚಣಿ ಪಾವತಿ : ಆದೇಶ

ರಾಜ್ಯ ಸರ್ಕಾರಿ ನೌಕರರಿಗೆ ಇದೀಗ ಸಂತಸದ ವಿಷಯ…

ಕೊರೊನಾ ವೈರಸ್‌ ಸಮಸ್ಯೆಯಿಂದ ಉಂಟಾಗಿರುವ ಆರ್ಥಿಕ ನಷ್ಟವನ್ನು ಸರಿದೂಗಿಸಿಕೊಳ್ಳಲು ಸರ್ಕಾರಿ ನೌಕರರ ಎಪ್ರಿಲ್‌ ತಿಂಗಳ ವೇತನದಲ್ಲಿ ಯಾವುದೇ ಕಡಿತಗೊಳಿಸದಿರಲು ಜೊತೆಗೆ ಅನುದಾನಿತ ಸಂಸ್ಥೆಗಳ ತುಟ್ಟಿಭತ್ಯೆ ತಡೆಹಿಡಿಯಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಈ ಸಂಬಂಧ ಆರ್ಥಿಕ ಇಲಾಖೆ ಮಂಗಳವಾರ ಆದೇಶವನ್ನು ಹೊರಡಿಸಿದೆ. ಹೀಗಾಗಿ ಸದ್ಯದ ಮಟ್ಟಿಗೆ ನೌಕರರ ಜೇಬಿಗೆ ಕತ್ತರಿ ಹಾಕುವಂತಹ ಯಾವುದೇ ಪ್ರಸ್ತಾಪ ಇಲ್ಲ, ಇದರಿಂದ ವೇತನ ಮತ್ತು ಪಿಂಚಣಿ ಕಡಿತವಾಗಬಹುದು ಎಂಬ ನೌಕರರ ಆತಂಕ ದೂರವಾಗಿದೆ.

ವಿವಿಧ ಇಲಾಖೆಗಳಲ್ಲಿ ವೇತನ ಮತ್ತು ಪಿಂಚಣಿಗಾಗಿ ನಿಗದಿ ಮಾಡಿಟ್ಟಿರುವ ಹಣವನ್ನು ಬಳಸುವಂತೆ ಮತ್ತು ಖಜಾನೆಗಳಲ್ಲಿ ಯಾವುದೇ ತಿಂಗಳಿನ ವೇತನದ ಹಣವನ್ನು ಬಾಕಿ ಇಟ್ಟುಕೊಳ್ಳುವಂತಿಲ್ಲ ಹಾಗೂ ಆಡಳಿತ ಇಲಾಖೆ ಮಾರ್ಚ್‌ ತಿಂಗಳ ವೇತನವನ್ನು ಪಾವತಿ ಮಾಡಿಲ್ಲವಾದರೆ, ಆ ಹಣವನ್ನು ಪಡೆಯಲು ಅವಕಾಶ ನೀಡಬೇಕು ಎಂದು ಆದೇಶದಲ್ಲಿ ಸ್ಪಷ್ಟ ಪಡಿಸಿದೆ.

ಈ ಬಗ್ಗೆ ಮಂಗಳವಾರ ಬೆಳಿಗ್ಗೆ ಮುಖ್ಯಮಂತ್ರಿ ಬಿ.ಎಸ್.‌ಯಡಿಯೂರಪ್ಪ ಅವರು ಹಣಕಾಸು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಪೂರ್ಣ ವೇತನ ಮತ್ತು ಪಿಂಚಣಿ ಪಾವತಿ ಮಾಡುವಂತೆ ಕಟ್ಟಪ್ಪಣೆ ಮಾಡಿದ್ದಾರೆ ಎಂದು ಎಂದು ಮೂಲಗಳು ಹೇಳಿವೆ.

LEAVE A REPLY

Please enter your comment!
Please enter your name here