ಸರ್ಕಾರಿ ಕೆಲಸ ಖಾಲಿ ಇದೆ..! ಎಲ್ಲಿ?

ಹಾಲು ಉತ್ಪಾದಕರ ಒಕ್ಕೂಟದಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಅಹ್ವಾನಿಸಿದೆ. ಆಸಕ್ತರು ಅಧಿಕೃತ ವೆಬ್ ಸೈಟ್ ಗೆ  ಹೋಗಿ ಅಧಿಸೂಚನೆಗಳನ್ನು ಓದಬಹುದು. 

ಕಲಬುರ್ಗಿ, ಬೀದರ್‌ ಮತ್ತು ಯಾದಗಿರಿ ಜಿಲ್ಲೆಗಳ ಹಾಲು ಉತ್ಪಾದಕರ ಒಕ್ಕೂಟ (ಗುಮುಲ್)‌ 37 ಹುದ್ದೆಗಳ ಭರ್ತಿಗೆ ಅರ್ಜಿ ಅಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಆನ್ ಲೈನ್‌ ಮೂಲಕವೇ ಅರ್ಜಿಗಳನ್ನು ಸಲ್ಲಿಸಬಹುದು. 

ಒಟ್ಟು ಹುದ್ದೆಗಳ ಸಂಖ್ಯೆ- 37

ಹುದ್ದೆಗಳು- ಮಾರುಕಟ್ಟೆ ಅಧೀಕ್ಷಕರು, ವಿಸ್ತರಣಾಧಿಕಾರಿ ದರ್ಜೆ-೩, ಕಿರಿಯ ತಾಂತ್ರಿಕರು, ಮಾರುಕಟ್ಟೆ ಅಧಿಕಾರಿ, ಮಾರುಕಟ್ಟೆ ಅಧೀಕ್ಷಕರು, ಮತ್ತು ಖರೀದಿ/ ಉಗ್ರಾಣಾಧಿಕಾರಿ

ವಿದ್ಯಾರ್ಹತೆ: ಪಿ.ಯು.ಸಿ, ಪದವಿ. ಡಿಪ್ಲೋಮಾ, ಐಟಿಐ, (ಹುದ್ದೆಗೆ ಅನುಗುಣವಾಗಿ ನಿಗದಿಪಡಿಸಲಾಗಿದೆ)

ವಯೋಮಿತಿ : ಕನಿ಼ಷ್ಟ 18 – ಗರಿಷ್ಟ 35 (ಮೀಸಲಾತಿ ಅನ್ವಯ ಸಡಿಲಿಕೆ ಇರುತ್ತದೆ)

ಅರ್ಜಿ ಶುಲ್ಕ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-೧, ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ರೂ 400. ಸಾಮಾನ್ಯ ಮತ್ತು ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ರೂ 800.

ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ಸಂದರ್ಶನ

ಉದ್ಯೋಗ ಸ್ಥಳ : ಕಲಬುರ್ಗಿ

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 6 ಜನವರಿ 2020

ಹೆಚ್ಚಿನ ಮಾಹಿತಿಗಾಗಿ : http://recruit-app.com/gumul2019/

LEAVE A REPLY

Please enter your comment!
Please enter your name here