ಸಮುದಾಯಕ್ಕೂ ಕೊರೋನಾ ಹಬ್ಬುವ ಭೀತಿ – ಮೇ 29ರವರೆಗೆ ಲಾಕ್‌ಡೌನ್‌ ವಿಸ್ತರಣೆ ಶಾಕ್‌

ತೆಲಂಗಾಣದಲ್ಲಿ ಲಾಕ್‌ಡೌನ್‌ನ್ನು ಮೇ 29ರವರೆಗೂ ವಿಸ್ತರಿಸಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್‌ರಾವ್‌ ಆದೇಶ ಹೊರಡಿಸಿದ್ದಾರೆ.

ಏಳು ಗಂಟೆಗಳ ಸುದೀರ್ಘ ಕ್ಯಾಬಿನೆಟ್‌ ಸಭೆಯ ಬಳಿಕ ಮೇ ತಿಂಗಳ ಅಂತ್ಯದವರೆಗೂ ಲಾಕ್‌ಡೌನ್‌ ವಿಸ್ತರಣೆಗೆ ಕೆಸಿಆರ್‌ ನಿರ್ಧರಿಸಿದ್ದಾರೆ. ರೆಡ್‌ಝೋನ್‌ ಜಿಲ್ಲೆಗಳ ಮದ್ಯ ಮಾರಾಟ ಇರಲ್ಲ ಎಂದಿರುವ ಸಿಎಂ, ಅವಶ್ಯಕ ವಸ್ತುಗಳ ಮಾರಾಟಕ್ಕಷ್ಟೇ ಅನುಮತಿ ನೀಡಿದ್ದಾರೆ.

ನಾವು ಈ ಹಂತದಲ್ಲಿ ರಿಸ್ಕ್‌ ತೆಗೆದುಕೊಳ್ಳಲು ಸಿದ್ಧರಿಲ್ಲ. ಜನರ ನಮ್ಮೊಂದಿಗೆ ಸಹಕರಿಸಲೇಬೇಕು. ಕೊರೋನಾ ಸಮುದಾಯಕ್ಕೆ ಹಬ್ಬುವ ಸಾಧ್ಯತೆ ಇದೆ. ನಾವು ಚಿಂತಿತರಾಗಿದ್ದೇವೆ. ಜನ ನನ್ನ ಬಗ್ಗೆ ಸಿಟ್ಟು ಮಾಡಿಕೊಳ್ಳಬಹುದು. ಆದರೆ ನಮಗೆ ಬೇರೆ ಆಯ್ಕೆಗಳಿಲ್ಲ

ಎಂದು ತೆಲಂಗಾಣ ಸಿಎಂ ಹೇಳಿದ್ದಾರೆ.

ದೇಶಾದ್ಯಂತ ಹೇರಿಕೆ ಆಗಿರುವ ಲಾಕ್‌ಡೌನ್‌ ಮೇ 17ರಂದು ಕೊನೆ ಆಗಲಿದೆ. ಇದಾದ ಬಳಿಕವೂ ತೆಲಂಗಾಣದಲ್ಲಿ ಹೆಚ್ಚುವರಿ ಆಗಿ 12 ಲಾಕ್‌ಡೌನ್‌ ಮುಂದುವರಿಯಲಿದೆ.

.ರಾಜ್ಯದಲ್ಲಿ ಇವತ್ತು 11 ಹೊಸ ಪಾಸಿಟಿವ್‌ ಕೇಸ್‌ ವರದಿ ಆಗಿದ್ದು ರಾಜ್ಯದಲ್ಲಿ ಕೊರೋನಾ ಕೇಸ್‌ ಸಂಖ್ಯೆ 1,067ಕ್ಕೆ ಏರಿಕೆ ಆಗಿದೆ

ತೆಲಂಗಾಣ ಲಾಕ್‌ಡೌನ್‌ ವಿಸ್ತರಣೆ ಮಾಡುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ ಮೇ 3ರಂದು ಕೊನೆ ಆಗಬೇಕಿದ್ದ ಲಾಕ್‌ಡೌನ್‌ನ್ನು ಕೆಸಿಆರ್‌ ಮೇ 7ರವರೆಗೆ ವಿಸ್ತರಿಸಿದ್ದರು.

ವಿಶೇಷ ಎಂದರೆ ರಾಜ್ಯ ಸರ್ಕಾರಗಳು ಎರಡನೇ ಬಾರಿಗೆ ಏಪ್ರಿಲ್‌ 30ರವರೆಗೆ ಲಾಕ್‌ಡೌನ್‌ ವಿಸ್ತರಣೆಗೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದವು. ಆದರೆ ಕೇಂದ್ರ ಸರ್ಕಾರ ಮೇ 3ರವರೆಗೂ ಲಾಕ್‌ಡೌನ್‌ ವಿಸ್ತರಿಸಿತ್ತು.

ತೆಲಂಗಾಣ ಸಿಎಂ ಇವತ್ತು ತೆಗೆದುಕೊಂಡಿರುವ ನಿರ್ಧಾರ ರಾಷ್ಟ್ರಮಟ್ಟದಲ್ಲಿ ನಿರ್ಧಾರದ ಮೇಲೂ ಪರಿಣಾಮ ಬೀರಬಹುದು. ಸಮುದಾಯಕ್ಕೆ ಹಬ್ಬುವ ಆತಂಕದಲ್ಲಿ ಲಾಕ್‌ಡೌನ್‌ ವಿಸ್ತರಣೆಯ ತೀರ್ಮಾನ ಕೈಗೊಂಡಿದ್ದಾಗಿ ಸಿಎಂ ಹೇಳಿರುವ ಕಾರಣ ಕೇಂದ್ರ ಸರ್ಕಾರವೂ ಇದೇ ಸೂತ್ರವನ್ನು ಅನುಸರಿಸುತ್ತಾ ಎನ್ನುವ ಲೆಕ್ಕಾಚಾರ ಕೂಡಾ ಶುರುವಾಗಿದೆ.

ರೆಡ್‌ಝೋನ್‌ ಜಿಲ್ಲೆಗಳಲ್ಲಿ ಸಿಮೆಂಟ್‌, ಹಾರ್ಡ್‌ವೇರ್‌, ಎಲೆಕ್ಟ್ರಿಕ್‌ ಶಾಪ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ದಿನ ಬಿಟ್ಟು ಶೇಕಡಾ ೫೦ರಷ್ಟು ಅಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಆದರೆ ಅಂಗಡಿಗಳು ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತೆರೆಯಬಹುದು ಎಂದು ಸಿಎಂ ಕೆ ಚಂದ್ರಶೇಖರ್‌ರಾವ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here