ಸಬ್ಸಿಡಿ ರಹಿತ ಎಲ್‌ ಪಿ ಜಿ ಸಿಲಿಂಡರ್‌ ಬೆಲೆ ಭಾರೀ ಇಳಿಕೆ : ಇಂದಿನಿಂದಲೇ ಜಾರಿ

ಲಾಕ್‌ ಡೌನ್‌ ಸಂಕಷ್ಟದಲ್ಲಿರುವ ಜನರಿಗೆ ಕೇಂದ್ರ ಸರ್ಕಾರ ಇಂದು ಸಿಹಿ ಸುದ್ದಿ ನೀಡಿದೆ. ಸಬ್ಸಿಡಿ ರಹಿತ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಭಾರೀ ಇಳಿಕೆ ಮಾಡಿದೆ.

ಅಡುಗೆ ಅನಿಲ ಎಲ್‌ಪಿಜಿ ಸಿಲಿಂಡರ್‌ ಗಳ ದರ ಕಡಿತ ಮಾಡಲಾಗಿದ್ದು, ಪ್ರತೀ ಸಿಲಿಂಡರ್‌ಗೆ ರೂ 160 ರವರೆಗೆ ಇಳಿಕೆಯಾಗಿದೆ. ಕೇಂದ್ರ ಸರ್ಕಾರವು ಸತತ ಮೂರನೇ ಬಾರಿ ಎಲ್‌ಪಿಜಿ ರಹಿತ 14.2 ಕೆಜಿ ಸಿಲಿಂಡರ್ ರೂಪಾಯಿ 744 ರ ಬದಲು ರೂಪಾಯಿ 581.50 ಗೆ ಸಿಗಲಿದೆ.

ಅದೇ ರೀತಿ ದೇಶದ ಬೇರೆ ಬೇರೆ ಭಾಗಗಳಲ್ಲಿಯೂ ಬೆಲೆ ಇಳಿಸಲು ತೈಲ ಕಂಪನಿಗಳು ನಿರ್ಧರಿಸಿವೆ. ಮುಂಬೈನಲ್ಲಿ ಎಲ್‌ಪಿಜಿ ಸಿಲಿಂಡರ್ ಗೆ ರೂಪಾಯಿ 579 ವೆಚ್ಚವಾಗಲಿದ್ದು ಈ ಮೊದಲು ರೂಪಾಯಿ 714 ನೀಡಬೇಕಿತ್ತು. ಕೊಲ್ಕತ್ತದಲ್ಲಿ ರೂಪಾಯಿ 584.50 ಮತ್ತು ಚೆನ್ನೈನಲ್ಲಿ ಇರಲಿದೆ.

ಮಾರ್ಚ್ 25ರಿಂದ ದೇಶಾದ್ಯಂತ ಲಾಕ್‌ಡೌನ್ ಘೋಷಣೆಯಾದಾಗಿನಿಂದ ದೇಶದಲ್ಲಿ ಸಿಲಿಂಡರ್ ಗಳನ್ನು ಅಧಿಕ ಪ್ರಮಾಣದಲ್ಲಿ ಖರೀದಿಸಲಾಗುತ್ತಿದೆ ಎಂದು ವರದಿಯಾಗಿತ್ತು ಬೇಡಿಕೆ ಪೂರೈಸಲು ಲಭ್ಯವಿರುವುದರಿಂದ ಆಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.

ಲಾಕ್‌ ಡೌನ್ ಜಾರಿಯಾದ ನಂತರ ಏಪ್ರಿಲ್ ನಿಂದ ಜೂನ್ ವರೆಗೆ ಸುಮಾರು 8 ಕೋಟಿ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಉಚಿತವಾಗಿ ಸಿಲಿಂಡರ್‌ಗಳನ್ನು ನೀಡಲು ಕೇಂದ್ರ ಸರ್ಕಾರ ಹೊಸದಾಗಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆ ಆರಂಭಿಸಿದೆ

LEAVE A REPLY

Please enter your comment!
Please enter your name here