ಸದ್ಯಕ್ಕೆ ಇಲ್ಲ – ಎನ್‌ಆರ್‌ಸಿ ಬಗ್ಗೆ ಕೇಂದ್ರ ಗೃಹ ಅಮಿತ್‌ ಶಾ ಉತ್ತರ..!

ರಾಷ್ಟ್ರಾದ್ಯಂತ ಎನ್‌ಆರ್‌ಸಿ ಜಾರಿ ಸಂಬಂಧ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಲೋಕಸಭೆಯಲ್ಲೇ ತಮ್ಮ ಹೇಳಿಕೆಯನ್ನೇ ಬದಲಿಸಿದ್ದಾರೆ. ಸದ್ಯಕ್ಕೆ ರಾಷ್ಟ್ರಾದ್ಯಂತ ಎನ್‌ಆರ್‌ಸಿ ಜಾರಿ ಬಗ್ಗೆ ಯಾವುದೇ ನಿರ್ಧಾರ ಮಾಡಿಲ್ಲ ಎಂದು ಲಿಖಿತ ರೂಪದಲ್ಲಿ ಉತ್ತರ ನೀಡಿದ್ದಾರೆ.

ಕೇಂದ್ರ ಗೃಹ ಸಚಿವಾಲಯಕ್ಕೆ ಕೇಳಿದ್ದ ಪ್ರಶ್ನೆಗಳು:

೧) ರಾಷ್ಟ್ರ ಮಟ್ಟದಲ್ಲಿ ಎಲ್ಲ ನಾಗರಿಕರಿಗೂ ಕೇಂದ್ರ ಸರ್ಕಾರ ರಾಷ್ಟ್ರೀಯ ನಾಗರಿಕತ್ವ ನೋಂದಣಿ ಜಾರಿಗೆ ತರುವ ಉದ್ದೇಶ ಇದ್ಯಾ..?

೨) ಒಂದು ವೇಳೆ ಹೌದು ಎಂದಾದಲ್ಲಿ ಎನ್‌ಆರ್‌ಸಿ ಜಾರಿಗೆ ನಿಗದಿಪಡಿಸಿರುವ ಕಾಲಮಿತಿ ಎಷ್ಟು..?

೩) ಎನ್‌ಆರ್‌ಸಿಯಿಂದ ನಾಗರಿಕರ ಮೇಲೆ ಹೆಚ್ಚಿನ ಹೊರೆ ಬೀಳುತ್ತದೆ ಎಂಬ ಮಾಹಿತಿ ಸರ್ಕಾರಕ್ಕೆ ಇದ್ಯಾ..?

೪) ಎನ್‌ಆರ್‌ಸಿ ಜಾರಿಗೂ ಮೊದಲು ಸರ್ಕಾರ ರಾಜ್ಯ ಸರ್ಕಾರ ವಿಶ್ವಾಸಕ್ಕೆ ತೆಗೆದುಕೊಂಡಿದ್ಯಾ..?

೫) ರಾಜ್ಯ ಸರ್ಕಾರಗಳು ಎನ್‌ಆರ್‌ಸಿ ಜಾರಿ ಮಾಡಲ್ಲ ಎಂಬ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ಬಂದಿದ್ಯಾ..? ಬಂದಿದ್ದರೆ ಅವುಗಳ ಬಗ್ಗೆ ವಿವರ ಕೊಡಿ

ಉತ್ತರ:

ಇಲ್ಲಿವರೆಗೆ ಎನ್‌ಆರ್‌ಸಿ ಬಗ್ಗೆ ಸರ್ಕಾರ ಯಾವುದೇ ಕ್ರಮಕೈಗೊಂಡಿಲ್ಲ. ಹೀಗಾಗಿ ಎನ್‌ಆರ್‌ಸಿ ಸಂಬಂಧ ಉಳಿದ ಪ್ರಶ್ನೆಗಳು ಉದ್ಭವಿಸಲ್ಲ

ಆದರೆ ನವೆಂಬರ್‌ನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಸಂಬಂಧ ನಡೆದಿದ್ದ ಚರ್ಚೆ ವೇಳೆ ಗೃಹ ಸಚಿವ ಅಮಿತ್‌ ಶಾ ದೇಶಾದ್ಯಂತ ಎನ್‌ಆರ್‌ಸಿ ಜಾರಿ ಮಾಡುವುದಕ್ಕಾಗಿ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಮಾಡಿದ್ದ ಹೇಳಿಕೆ ನೀಡಿದ್ದರು.

ಡಿಸೆಂಬರ್‌ ೨೪ರಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದಿದ್ದ ಕ್ಯಾಬಿನೆಟ್‌ ಸಭೆಯಲ್ಲಿ ದೇಶಾದ್ಯಂತ ಎನ್‌ಪಿಆರ್‌ (ರಾಷ್ಟ್ರೀಯ ಜನಸಂಖ್ಯಾ ನೋಂದಣಿ) ಜಾರಿಗಾಗಿ ೩,೯೪೧ ಕೋಟಿ ರೂಪಾಯಿ ಅನುದಾನವನ್ನು ಘೋಷಿಸಲಾಗಿತ್ತು.

ಇದಕ್ಕೂ ಕೆಲ ತಿಂಗಳು ಮೊದಲು ಕಾಲಾನುಕ್ರಮಣಿಕೆ ಮಾತುಗಳನ್ನಾಡಿದ್ದ ಅಮಿತ್‌ ಶಾ ಮೊದಲು ಸಿಎಎ ಬರುತ್ತೆ, ಆಮೇಲೆ ಎನ್‌ಆರ್‌ಸಿ ಬರುತ್ತೆ. ಎನ್‌ಆರ್‌ಸಿ ಅಸ್ಸಾಂ ಮಾತ್ರವಲ್ಲ ಇಡೀ ದೇಶದಲ್ಲೇ ಜಾರಿಯಾಗುತ್ತದೆ ಎಂದಿದ್ದರು.

LEAVE A REPLY

Please enter your comment!
Please enter your name here