ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಾಲ ಸೌಲಭ್ಯಕ್ಕೆ ಪ್ರಧಾನಿ ಮೋದಿ ಸರ್ಕಾರದ ಅನುಮೋದನೆ

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿತಿಗತಿ ಸುಧಾರಣೆಗೆ ಘೋಷಣೆ ಆಗಿದ್ದ 20 ಲಕ್ಷ ರೂಪಾಯಿ ಕೋಟಿ ರೂಪಾಯಿ ಪ್ಯಾಕೇಜ್‌ಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ಪ್ರಧಾನಿ ಮೋದಿ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್‌ ಸಭೆಯಲ್ಲಿ ಪ್ಯಾಕೇಜ್‌ಗೆ ಅನುಮೋದನೆ ನೀಡಲಾಯಿತು.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹಣಕಾಸು ನೆರವನ್ನು ಅನುಮೋದಿಸಿರುವ ಸರ್ಕಾರ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ವ್ಯಾಖ್ಯಾನವನ್ನು ಬದಲಿಸಲಿದ್ದು, ಎಂಎಸ್‌ಎಂಇ ಕಾಯ್ದೆಯ  ತಿದ್ದುಪಡಿದೆ ಒಪ್ಪಿಗೆ ಸೂಚಿಸಿದೆ.

1 ಕೋಟಿ ರೂಪಾಯಿ ಬಂಡವಾಳ ಇರುವ 5 ಕೋಟಿ ರೂಪಾಯಿವರೆಗೆ ವ್ಯವಹಾರ ನಡೆಸುವ ಕೈಗಾರಿಕೆಯನ್ನು ಸೂಕ್ಷ್ಮ ಕೈಗಾರಿಕೆ ಎಂದು, 10 ಕೋಟಿ ರೂಪಾಯಿವರೆಗಿನ ಬಂಡವಾಳ ಮತ್ತು 50 ಕೋಟಿ ರೂಪಾಯಿವರೆಗಿನ ವ್ಯವಹಾರ ಇರುವ ಕೈಗಾರಿಕೆಯನ್ನು ಸಣ್ಣ ಕೈಗಾರಿಕೆ ಎಂದು, 20 ಕೋಟಿ ರೂಪಾಯಿ ಬಂಡವಾಳ ಇರುವ ಮತ್ತು 100 ಕೋಟಿ ರೂಪಾಯಿವರೆಗಿನ ವ್ಯವಹಾರ ಹೊಂದಿರುವ ಕೈಗಾರಿಕೆಯನ್ನು ಮಧ್ಯಮ ಕೈಗಾರಿಕೆಯೆಂದು ಸರ್ಕಾರ ಹೊಸ ವ್ಯಾಖ್ಯಾನಿಸಿದೆ.

ನಿಮಗೆ ನೀವೇ ಗತಿ- ಸಣ್ಣ ಕೈಗಾರಿಕೆಗಳಿಗೆ ಸಿಕ್ಕಿದ್ದು ಸಾಲವಷ್ಟೇ..! ಗಿಮಿಕ್‌ ಎನಿಸಿಕೊಂಡ ವಿಶೇಷ ಪ್ಯಾಕೇಜ್‌ನ ‌ಮೊದಲ ದಿನ

2006ರಲ್ಲಿ ಎಂಎಸ್‌ಎಂಇ ಕಾಯಿದೆ ಬಂದ ಬಳಿಕ ಮೊದಲ ಬಾರಿಗೆ ಕಾಯ್ದೆಯಲ್ಲಿ ಈ ಬದಲಾವಣೆಯನ್ನು ತರಲಾಗಿದೆ.

ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಸಂಕಷ್ಟ ನಿಧಿಯಾಗಿ 40 ಸಾವಿರ ಕೋಟಿ ರೂಪಾಯಿಯನ್ನು ತೆಗೆದಿಡಲಾಗಿದ್ದು, ಎಂಎಸ್‌ಎಂಇಗಳು ಷೇರು ಮಾರುಕಟ್ಟೆ ಪ್ರವೇಶ ಮಾಡುವ ಸಲುವಾಗಿ 50 ಸಾವಿರ ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ನೀಡಲಾಗುತ್ತದೆ. ಅಲ್ಲದೇ 3 ಲಕ್ಷ ಕೋಟಿ ರೂಪಾಯಿ ಸಾಲ ಗ್ಯಾರಂಟಿ ಯೋಜನೆಗೂ ಅನುಮೋದನೆ ಸಿಕ್ಕಿದೆ.

LEAVE A REPLY

Please enter your comment!
Please enter your name here