ಸಚಿವ ಶ್ರೀರಾಮುಲು ಮಗಳಿಗೆ ಮದುವೆ ಸಂಭ್ರಮ

ಸಚಿವ ಶ್ರೀರಾಮುಲು ಪುತ್ರಿಯ ಮದುವೆಯು ಬಹಳ ಅದ್ಧೂರಿಯಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಮಾರ್ಚ್‌ 5, 2020 ರಂದು ನಡೆದಿದ್ದು, ಶ್ರೀರಾಮುಲು ಪುತ್ರಿ ರಕ್ಷಿತಾ ಹೈದರಾಬಾದ್‌ ಮೂಲದ ಲಲಿತ್ ಸಂಜೀವ್ ರೆಡ್ಡಿ ಕೈ ಹಿಡಿದಿದ್ದಾರೆ.

ಬೆಂಗಳೂರಿನ ಪ್ಯಾಲೇಸ್ ಮೈದಾನ ಅರಮನೆ ಮೈದಾನದ ಸುಮಾರು 40 ಎಕರೆ ಜಾಗದಲ್ಲಿ ಹಾಕಲಾಗಿದ್ದ ಬೃಹತ್ ಸೆಟ್‌ನಲ್ಲಿ  ಅದ್ಧೂರಿ ಸೆಟ್‌ನಲ್ಲಿ ಮದುವೆ ನಡೆದಿದ್ದು ಹಂಪಿ ವಿರೂಪಾಕ್ಷೇಶ್ವರ ದೇವಸ್ಥಾನ ಹಾಗೂ ತಿರುಪತಿ ತಿಮ್ಮಪ್ಪ ದೇವಸ್ಥಾನದ ಮಾದರಿಯಲ್ಲಿ ಸೆಟ್‌ನ್ನು ನಿರ್ಮಿಸಲಾಗಿತ್ತು.

ಫೆಬ್ರವರಿ 27 ರಂದು ಪ್ರಾರಂಭವಾದ ಮದುವೆ ಶಾಸ್ತ್ರ ಬರೋಬ್ಬರಿ 9 ದಿನಗಳ ಕಾಲ ನಡೆದಿದೆ. ತನ್ನ ಪುತ್ರಿಯ ಈ ಅದ್ಧೂರಿ ಮದುವೆಗೆ ಕೋಟ್ಯಂತರ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ ಶ್ರೀರಾಮುಲು ಎನ್ನಲಾಗುತ್ತಿದೆ. ಮಾಧ್ಯಮಗಳ ವರದಿ ಪ್ರಕಾರ 500 ಕೋಟಿ ಹಣವನ್ನು ಖರ್ಚು ಮಾಡಲಾಗಿದೆಯಂತೆ.

ಮಾಜಿ ಸಚಿವ ಜನಾರ್ದನ ರೆಡ್ಡಿ, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ,ಮುಖ್ಯಮಂತ್ರಿ ಯಡಿಯೂರಪ್ಪ,ಶ್ರೀರಾಮುಲು ಗೆಳೆಯ ನಟ ಕಿಚ್ಚ ಸುದೀಪ್, ಸಚಿವರು ವಿವಿಧ ಪಕ್ಷಗಳ ಶಾಸಕರು ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿ ವಧು ರಕ್ಷಿತಾ ಮತ್ತು ವರ ಸಂಜೀವ್ ರೆಡ್ಡಿಗೆ ಶುಭಹಾರೈಸಿದರು.

ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶುಭ ಹಾರೈಸಿದರು

ವಧುವಿನ ಆಗಮನದ ಕ್ಷಣ

ಶ್ರೀರಾಮುಲು ಮಗಳು ರಕ್ಷಿತಾ ಎಂಬಿಎ ಪದವೀಧರೆ

ವಧುವಿನ ತಂದೆ-ತಾಯಿ ವರನ ಕುಟುಂಬಸ್ಥರಿಗೆ ನೆರವೇರಿಸುತ್ತಿರುವ ಶಾಸ್ತ್ರಗಳು

ವಧುವಿನ ತಂದೆ-ತಾಯಿ ವರನ ಕುಟುಂಬಸ್ಥರಿಗೆ ನೆರವೇರಿಸುತ್ತಿರುವ ಶಾಸ್ತ್ರಗಳು

ಅದ್ಧೂರಿ ಮೆರವಣಿಗೆಯಲ್ಲಿ ವಧುವಿನ ಆಗಮನ

ನೂತನ ವಧು-ವರರಿಗೆ ಆರತಿ ಶಾಸ್ತ್ರ

ಸಚಿವ ಶ್ರೀರಾಮುಲು ದಂಪತಿ

LEAVE A REPLY

Please enter your comment!
Please enter your name here