ಸಚಿನ್ ಚಾಲೆಂಜ್.. ಒಂದು ವಾರ ಡೆಡ್‍ಲೈನ್

ಲೆಜೆಂಡರಿ ಕ್ರಿಕೆಟರ್ ಸಚಿನ್ ತೆಂಡೂಲ್ಕರ್ ತಮ್ಮ ಆಪ್ತ ಗೆಳೆಯ ವಿನೋದ್ ಕಾಂಬ್ಳಿಗೆ ಸವಾಲೊಂದನ್ನು ಹಾಕಿದ್ದಾರೆ. ಅಲ್ಲದೇ ಏಳು ದಿನಗಳ ಗಡುವು ಕೂಡ ನೀಡಿದ್ದಾರೆ. ಸಚಿವ ಸವಾಲನ್ನು ವಿನೋದ್ ಕಾಂಬ್ಳಿ ಸ್ವೀಕರಿಸಿದ್ದು, ಒಂದು ವಾರದಲ್ಲಿ ಮಾಡಿ ತೋರಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಷ್ಟಕ್ಕೂ ಚಾಲೆಂಜ್ ಏನು..?
ಕಳೆದ ವಾರ ಗಾಯಕ ಸೋನು ನಿಗಮ್ ಜೊತೆಗೂಡಿ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ವಾಲಿ ಬಿಟ್ ಪೇ ಹಾಡನ್ನು ಹಾಡಿದ್ದರು. ಇದನ್ನು ಕೇವಲ 7 ದಿನಗಳಲ್ಲಿ ರ್ಯಾಪ್ ಮಾಡಬೇಕೆಂದು ವಿನೋದ್ ಕಾಂಬ್ಳಿಗೆ ಸಚಿನ್ ಚಾಲೆಂಜ್ ಹಾಕಿದ್ದಾರೆ. ಜನವರಿ 28ರೊಂಲಗೆ ಕ್ರಿಕೆಟ್ ವಾಲಿ ಬಿಟ್ ಪೇ ಹಾಡನ್ನು ರ್ಯಾಪ್ ಸಾಂಗ್ ರೂಪದಲ್ಲಿ ಹಾಡದಿದ್ದರೇ ತಾನು ಕೇಳಿದ್ದನ್ನು ಕೊಡಬೇಕು ಎಂದು ಸಚಿನ್ ಸವಾಲು ಹಾಕಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ

LEAVE A REPLY

Please enter your comment!
Please enter your name here