ಸಂಸದ ತೇಜಸ್ವಿ ಸೂರ್ಯರ ಕೋಮುವಾದದ ಟ್ವೀಟ್‌ ಬ್ಲಾಕ್‌ ಮಾಡಿದ ಟ್ವಿಟರ್

‌ಬಿಜೆಪಿ ಪಕ್ಷದ ಯುವನಾಯಕ, ಸಂಸದ ತೇಜಸ್ವಿ ಸೂರ್ಯ ಸಂಸದನಾಗುವ ಮೊದಲು 2015ರಲ್ಲಿ ತಮ್ಮ ಟ್ವಿಟ್ಟರ್​ ಖಾತೆಯಲ್ಲಿ ತೇಜಸ್ವಿ ಸೂರ್ಯ ಪೋಸ್ಟ್​ ಒಂದನ್ನು ಮಾಡಿದ್ದರು.

ಅದರಲ್ಲಿ, “ಭಯೋತ್ಪಾದನೆಗೆ ಧರ್ಮವಿಲ್ಲ. ಆದರೆ, ಭಯೋತ್ಪಾದಕರಿಗೆ ಧರ್ಮ ಇದ್ದೇ ಇದೆ. ಬಹುತೇಕ ಪ್ರಕರಣಗಳಲ್ಲಿ ಅವರು ಮುಸ್ಲೀಮರೇ ಆಗಿದ್ದಾರೆ,” ಎಂದು ಹೇಳಿದ್ದರು. ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾಗಿತ್ತು.

ಈ ಟ್ವೀಟ್​ ಡಿಲೀಟ್​ ಮಾಡುವಂತೆ ಸಾಕಷ್ಟು ಜನರು ಆಗ್ರಹಿಸಿದ್ದರು. ಆದಾಗ್ಯೂ ತೇಜಸ್ವಿ ಸೂರ್ಯ ಅವರು ಟ್ವೀಟ್​ ಅಳಿಸಿ ಹಾಕಿರಲಿಲ್ಲ. ಆದರೆ ಈಗ ಈ ಪೋಸ್ಟ್​ ಬ್ಲಾಕ್​ ಮಾಡುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಮಾಹಿತಿ ಇಲಾಖೆ ಟ್ವಿಟ್ಟರ್ ಬಳಿ ಕೋರಿದೆ ಎನ್ನಲಾಗಿದೆ.

ಹಾರ್ವರ್ಡ್‌ ವಿಶ್ವವಿದ್ಯಾನಿಲಯದ ಬರ್ಕ್ ಮನ್‌ ಕ್ಲೀನ್‌ ಸೆಂಟರ್‌ ಪ್ರಾರಂಭಿಸಿರುವ ಡಾಟಾಬೇಸ್‌ ಕಂಟೆಂಟ್‌ಗಳನ್ನು ತೆಗೆದು ಹಾಕುವಂತೆ ಟ್ವಿಟರ್‌ ಸ್ವೀಕರಿಸುವ ಇಂತಹ ಮನವಿಗಳನ್ನು ಕ್ರೋಢೀಕರಿಸಿ ಪ್ರಕಟಿಸುತ್ತದೆ.

ಭಾರತ ಸರ್ಕಾರದ ಮನವಿಯ ಮೇರೆಗೆ ತೆಗೆಯಲಾಗಿರುವ ಇಂತಹ ಟ್ವೀಟ್‌ ಗಳಲ್ಲಿ ಹೆಚ್ಚಿನವು ಧಾರ್ಮಿಕ ಗುಂಪುಗಳ ನಡುವೆ ವೈಷಮ್ಯವನ್ನುಂಟುಮಾಡಿ ಘರ್ಷಣೆಗೆ ಕಾರಣವಾಗುವ ಸಾಧ್ಯತೆಯನ್ನು ಹೊಂದಿದ್ದವು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here