ಸಂಸತ್​ ಅಧಿವೇಶನದಲ್ಲಿ ಸರ್ಕಾರಕ್ಕೆ ಪ್ರಶ್ನೆ ಕೇಳಲು ಸಂಸದರಿಗೆ ಅವಕಾಶವೇ ಇಲ್ಲ..!

ಸೆಪ್ಟೆಂಬರ್​ 14ರಿಂದ ಸಂಸತ್ತಿನ ಮಳೆಗಾಲದ ಅಧಿವೇಶನ ಆರಂಭವಾಗಲಿದೆ. ಆದರೆ ಈ ಬಾರಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳುವ ಅವಕಾಶ ಸಂಸದಗಿರಲ್ಲ.

ಲೋಕಸಭೆಯ ಮೊದಲ ದಿನದ ಕಲಾಪ ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ನಡೆಯಲಿದೆ. ಸೆಪ್ಟೆಂಬರ್​ 15ರಿಂದ ಮಧ್ಯಾಹ್ನ 3 ಗಂಟೆಯಿಂದ ಸಂಜೆ 7 ಗಂಟೆವರೆಗೆ ನಡೆಯಲಿದೆ.

ಅಧಿವೇಶನದಲ್ಲಿ ಪ್ರಶ್ನೋತ್ತರ ಕಲಾಪಕ್ಕೆ ಅವಕಾಶ ಇರಲ್ಲ ಎಂದು ಲೋಕಸಭೆಯ ಪ್ರಕಟಣೆ ಹೇಳಿದೆ.

ಕೊರೋನಾ ಹೊತ್ತಲ್ಲಿ ಸರ್ಕಾರಕ್ಕೆ ಪ್ರಶ್ನೆಗಳನ್ನು ಕೇಳಲು ಸಿದ್ಧರಾಗಿರುವ ವಿರೋಧ ಪಕ್ಷಗಳಿಗೆ ಲೋಕಸಭೆ ಸ್ಪೀಕರ್​ ಆಘಾತ ನೀಡಿದ್ದಾರೆ.

LEAVE A REPLY

Please enter your comment!
Please enter your name here