ಸಂಕ್ರಾಂತಿಗೆ ಆಂಜನೇಯನ ಗೆಟಪ್‌ನಲ್ಲಿ ರಾಬರ್ಟ್‌ ದರ್ಶನ್‌..!

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ ಹೊಸ ಸಿನಿಮಾ ರಾಬರ್ಟ್‌ ಸಿನಿಮಾದ ಎರಡನೇಯ ಮೋಷನ್‌ ಪೋಸ್ಟರ್‌ ಬಿಡುಗಡೆ ಆಗಿದೆ. ಈ ಮೋಷನ್‌ ಪೋಸ್ಟರ್‌ನಲ್ಲಿ ಡಿ ಬಾಸ್‌ ಭಜರಂಗಿ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ದಶಶಿರಗಳ ರಾವಣನನ್ನು ದಹನ ಮಾಡುವ ಶ್ರೀರಾಮ, ಆ ಶ್ರೀರಾಮನನ್ನು ಹೆಗಲಲ್ಲಿ ಹೊತ್ತಿರುವ ಆಂಜನೇಯನ ಅವತಾರದಲ್ಲಿ ದಾಸ ಕಾಣಿಸಿಕೊಂಡಿದ್ದಾರೆ.

ಮೋಷನ್‌ ಪೋಸ್ಟರ್‌ ಉದ್ದಕ್ಕೂ ಜೈಶ್ರೀರಾಮ್‌ ಘೋಷಣೆ ಮೊಳಗುತ್ತದೆ.

ರಾಬರ್ಟ್‌ ಸಿನಿಮಾದ ಮೊದಲ ಮೋಷನ್‌ ಪೋಸ್ಟರ್‌ಗೂ ಎರಡನೇಯದ್ದಕ್ಕೂ ಅಜಗತಾಂತರ ವ್ಯತ್ಯಾಸವಿದೆ. ಮೊದಲ ಪೋಸ್ಟರ್‌ನಲ್ಲಿ ಡಿ ಬಾಸ್‌ ಹೊಸ ಹೇರ್‌ಸ್ಟೈಲ್‌ನಲ್ಲಿ ಕಾಣಿಸಿಕೊಂಡು ಕುತೂಹಲ ಹುಟ್ಟಿಸಿದ್ದರು.

ಸಿನಿಮಾಕ್ಕೆ ತರುಣ್‌ ಕಿಶೋರ್‌ ನಿರ್ದೇಶನವಿದೆ.

LEAVE A REPLY

Please enter your comment!
Please enter your name here