ಸಂಕಷ್ಟಕ್ಕೆ ತುತ್ತಾಗಿರುವ ಹೂವು ಬೆಳೆಗಾರರ ಪರಿಹಾರಧನಕ್ಕೆ ಅರ್ಜಿ ಆಹ್ವಾನ

ಚಿತ್ರ: ಪವಿತ್ರಾ

ಲಾಕ್​ಡೌನ್​ನಿಂದಾಗಿ ಸಣ್ಣ ಪುಟ್ಟ ವ್ಯಾಪಾರಿಗಳು, ದಿನಗೂಲಿ ನೌಕರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಹೂವು ಬೆಳೆಗಾರರಿಗೂ ಲಾಕ್​ಡೌನ್​ನ ಬಿಸಿ ತಟ್ಟಿದೆ.

ಈ ಹಿನ್ನೆಲೆಯಲ್ಲಿ ಕೆಲ ದಿನಗಳ ಹಿಂದೆ ರೈತರು ತಾವು ಬೆಳೆದ ಹೂವುಗಳನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದರು.ಲಾಕ್​ಡೌನ್​ನಿಂದಾಗಿ ಹೂವು ಮಾರಾಟವಾಗದೆ ಸಂಕಷ್ಟಕ್ಕೆ ತುತ್ತಾಗಿರುವ ರೈತರ ನೆರವಿಗೆ ಸರ್ಕಾರ ಬರಬೇಕೆಂದು ಮನವಿ ಮಾಡಿದ್ದರು.

ತೋಟಗಾರಿಕೆ ವತಿಯಿಂದ ಹೂವಿನ ಬೆಳೆಗಾರರಿಗೆ ಪರಿಹಾರ ಧನ ಕಾರ್ಯಕ್ರಮದಡಿ ಬೆಂಗಳೂರು ನಗರ ಜಿಲ್ಲೆಯ ಬೆಳೆಗಾರರಿಗೆ ಗರಿಷ್ಠ ಒಂದು ಹೆಕ್ಟೇರಿಗೆ 25 ಸಾವಿರ ಪರಿಹಾರ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.‌

ಲಾಕ್‍ಡೌನ್ ಅವಧಿಯಲ್ಲಿ ಹೂವು ಬೆಳೆ ನಷ್ಟ ಹೊಂದಿದ ರೈತರಿಗೆ ಮಾತ್ರ ಪರಿಹಾರ ಧನ ಸಿಗಲಿದೆ ಎಂದು ತೋಟಗಾರಿಕಾ ಇಲಾಖೆ ಸ್ಪಷ್ಟಪಡಿಸಿದೆ.

ಪರಿಹಾರ ಧನ ಪಡೆಯಲು ಪಹಣಿ ಆಧಾರ್ ಕಾರ್ಡ್ ಬ್ಯಾಂಕ್ ಖಾತೆಯ ಝೆರಾಕ್ಸ್ ಪ್ರತಿಗಳನ್ನು ಇದೇ ಮೇ 25ರ ಒಳಗೆ ಆಯಾ ತಾಲೂಕಿನ ತೋಟಗಾರಿಕೆ ಇಲಾಖೆ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬಹುದು.

LEAVE A REPLY

Please enter your comment!
Please enter your name here