ಶ್… ಟ್ರಂಪ್ ಬರ್ತಿದ್ದಾರೆ.. ಬೇಗ ಬೇಗ ಮುಚ್ಚಿಬಿಡಿ..!

ಪ್ರಧಾನಮಂತ್ರಿ ನರೇಂದ್ರ ಮೋದಿ, ಕಳೆದ ತಿಂಗಳು ತುಮಕೂರಿಗೆ ಭೇಟಿ ನೀಡುವುದಕ್ಕೂ ಮುನ್ನ, ಅಲ್ಲಿನ ರಸ್ತೆಗಳನ್ನು ಸರ್ವಾಂಗ ಸುಂದರಗೊಳಿಸಲಾಗಿತ್ತು. ರೋಡ್‍ಗಳೆಲ್ಲ ಲಕ ಲಕ ಹೊಳೆದಿದ್ದವು. ಇಡೀ ನಗರ ಫುಲ್ ಕ್ಲೀನ್ ಆಗಿತ್ತು. ಇದಕ್ಕೆ ಏನೋ, ಸಿದ್ದಗಂಗಾ ಮಠದ ಶ್ರೀಗಳು, ಆರು ತಿಂಗಳಿಗೊಮ್ಮೆ ಪ್ರಧಾನಮಂತ್ರಿ ಮೋದ ತುಮಕೂರಿಗೆ ಬರುವಂತಾಗಲಿ ಅಂದಿದ್ದರು. ಇದೆಲ್ಲ ಈಗ್ಯಾಕೆ ಅಂತಿದ್ದೀರಾ..? ಫೆ.24ರಂದು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ.

ಪ್ರವಾಸದ ಭಾಗವಾಗಿ ಅಹ್ಮದಾಬಾದ್‍ಗೆ ಟ್ರಂಪ್ ದಂಪತಿ ಭೇಟಿ ನೀಡಲಿದ್ದಾರೆ. ಇದಕ್ಕಾಗಿ ಗುಜರಾತ್ ಸರ್ಕಾರ ಸಿದ್ಧತೆಗಳಲ್ಲಿ ತೊಡಗಿದೆ. ರಸ್ತೆಗಳು ಟಾರ್ ಭಾಗ್ಯ ಕಾಣುತ್ತಿವೆ. ಕೇವಲ ಇಷ್ಟಕ್ಕೆ ಸುಮ್ಮನಾಗಿಲ್ಲ ಗುಜರಾತ್ ಬಿಜೆಪಿ ಸರ್ಕಾರ, ಸ್ಲಂಗಳು ಇರುವುದು ಟ್ರಂಪ್‍ಗೆ ಗೊತ್ತಾಗಬಾರದು ಎನ್ನುವ ಕಾರಣಕ್ಕೆ ಸ್ಲಂಗಳ ಮುಮದೆ ಬೃಹ್ ಗೋಡೆ ನಿರ್ಮಿಸುವ ಕೆಲಸದಲ್ಲಿ ತೊಡಗಿಕೊಂಡಿದೆ.

ಫೆ.24ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಜೊತೆಗೂಡಿ ಡೋನಾಲ್ಡ್ ಟ್ರಂಪ್ ಅಹ್ಮದಾಬಾದ್‍ಗೆ ಆಗಮಿಸಲಿದ್ದಾರೆ. ಏರ್‍ಪೋರ್ಟ್‍ನಿಂದ ಗಾಂಧಿ ನಗರದವರೆಗೂ ಆಯೋಜಿಸಿರುವ ಬೃಹತ್ ರೋಡ್ ಶೋನಲ್ಲಿ ಪಾಲ್ಗೊಳ್ಳಲಿದ್ದಾರೆ. ರೋಡ್ ಶೋ ನಡೆಯುವ ಮಾರ್ಗದಲ್ಲಿ ದೇವಶರಣ್ ಎಂದ ಸ್ಲಂ ಇದೆ. ಇಲ್ಲಿ 500ಕ್ಕೂ ಹೆಚ್ಚು ಗುಡಿಸಲುಗಳಿವೆ. 2500ಕ್ಕೂ ಹೆಚ್ಚು ಮಂದಿ ಇಲ್ಲಿ ವಾಸವಾಗಿದ್ದಾರೆ.

ಈ ಗುಡಿಸಲುಗಳು ಟ್ರಂಪ್‍ಗೆ ಕಾಣಿಸಬಾರದು ಎಂಬ ಕಾರಣಕ್ಕೆ ಹೆದ್ದಾರಿಯುದ್ದಕ್ಕೂ ಸುಮಾರು ಅರ್ಧ ಕಿಲೋಮೀಟರ್ ದೂರದವರೆಗೂ ಆರರಿಂದ ಏಳು ಅಡಿ ಎತ್ತರದ ಗೋಡೆಯನ್ನು ನಿರ್ಮಿಸಲು ರೂಪಾನಿ ಸರ್ಕಾರ ಆದೇಶ ನೀಡಿದೆ. ಈಗಾಗಲೇ ಗೋಡೆ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಗೋಡೆ ನಿರ್ಮಾಣದ ಬಳಿಕ ಅಲ್ಲಿ ಗಿಡಗಳನ್ನು ನೆಡಲು ಸಹ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ 50 ಕೋಟಿ ರೂ.ಗಳನ್ನು ರೂಪಾನಿ ಸರ್ಕಾರ ಖರ್ಚು ಮಾಡುತ್ತಿದೆ ಎನ್ನಲಾಗಿದೆ. ಈ ಬಗ್ಗೆ ವ್ಯಾಪಕ ಟೀಕೆಗಳು ಕೇಳಿಬಂದಿವೆ.

LEAVE A REPLY

Please enter your comment!
Please enter your name here