ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾ ಆಯ್ಕೆ – ಹೊಸಬರ ಕೂಟ – ಕನ್ನಡಿಗರಿಗೂ ಮಣೆ – ನಾಯಕ ಬದಲು

ಜುಲೈನಲ್ಲಿ ನಡೆಯಲಿರುವ ಶ್ರೀಲಂಕಾ ವಿರುದ್ಧದ 3 ಏಕದಿನ ಮತ್ತು 3 ಟಿ-ಟ್ವೆಂಟಿ ಪಂದ್ಯಗಳ ಸರಣಿ ಟೀಮ್ ಇಂಡಿಯಾವನ್ನು ಆಯ್ಕೆ ಮಾಡಲಾಗಿದೆ.

ಶಿಖರ್ ಧವನ್ ತಂಡದ ನಾಯಕರಾಗಿದ್ದಾರೆ. ಟೀಂ ಹೊಸಬರಿಂದಲೇ ತುಂಬಿದೆ.

ಜುಲೈನಲ್ಲಿ ಇಂಗ್ಲೆAಡ್ ಸರಣಿಯೂ ಇರುವ ಕಾರಣ ಶ್ರೀಲಂಕಾ ಸರಣಿಗೆ ಟೀಂ ಇಂಡಿಯಾದ ಮತ್ತೊಂದು ತಂಡವನ್ನು ಆಯ್ಕೆ ಮಾಡಲಾಗಿದ್ದು, ಹೊಸಬರೇ ಇದ್ದಾರೆ. ಇಂಗ್ಲೆAಡ್ ಸರಣಿ ದೀರ್ಘ ಆಗಿರುವ ಕಾರಣ ಶ್ರೀಲಂಕಾ ಸರಣಿಗೆ ಪ್ರತ್ಯೇಕ ತಂಡವನ್ನು ಆಯ್ಕೆ ಮಾಡಲಾಗಿದೆ.

ಕನ್ನಡಿಗ ಕೃಷ್ಣಪ್ಪ ಗೌತಮ್ ಮತ್ತು ದೇವದತ್ ಪಡಿಕ್ಕಲ್‌ಗೆ ಸ್ಥಾನ ದಕ್ಕಿದ್ದು ಮೊದಲ ಅಂತಾರಾಷ್ಟಿçÃಯ ಸರಣಿಯಲ್ಲಿ ಆಡಲಿದ್ದಾರೆ. ಮನೀಷ್ ಪಾಂಡೆ ಮತ್ತೆ ಅಂತಾರಾಷ್ಟಿçÃಯ ಏಕದಿನ ಪಂದ್ಯಕ್ಕೆ ಮರಳಿದ್ದಾರೆ.

ಭುವನೇಶ್ವರ್ ಕುಮಾರ್‌ಗೆ ಉಪ ನಾಯಕನ ಪಟ್ಟ ದಕ್ಕಿದೆ.

ಟೀಂ ಇಂಡಿಯಾ ಹೀಗಿದೆ:

ಶಿಖರ್ ಧವನ್ (ನಾನಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಪೃಥ್ವಿ ಶಾ, ದೇವದತ್ ಪಡಿಕ್ಕಲ್, ಆರ್ ಗಾಯಕ್‌ವಾಡ್, ಸೂರ್ಯ ಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ಯ ಪಾಂಡೆ, ನಿತಿಶ್ ರಾಣಾ, ಇಶಾನ್ ಕಿಶಾನ್ (ವಿಕೆಟ್ ಕೀಪರ್), ಸಂಜು ಸ್ಯಾಮ್ಸನ್ ( ವಿಕೆಟ್ ಕೀಪರ್), ವೈ ಚಹಲ್, ಆರ್ ಚಹರ್, ಕೆ ಗೌತಮ್, ಕೆ ಪಾಂಡ್ಯ, ಕುಲದೀಪ್ ಯಾದವ್, ವಿ ಚಕ್ರವರ್ತಿ, ಡಿ ಚಹರ್, ಎನ್ ಸೈನಿ, ಸಿ. ಸಕಾರಿಯಾ.

ಜುಲೈ 13, 16, 18ರಂದು ಶ್ರೀಲಂಕಾದಲ್ಲಿ ಏಕದಿನ ಪಂದ್ಯ ನಡೆಯಲಿದೆ. 21, 23, 25ರಂದು ಟಿ-ಟ್ವೆಂಟಿ ಪಂದ್ಯ ನಡೆಯಲಿದೆ.

LEAVE A REPLY

Please enter your comment!
Please enter your name here