ಶ್ರೀಮಂತ ಕನ್ನಡಿಗ ಬಿ ಆರ್ ಶೆಟ್ಟಿಗೆ ಏನಾಯ್ತು? ಅವರು ತೆಗೆದುಕೊಂಡ ನಿರ್ಧಾರವಾದರೂ ಏನು?

ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಪಡೆದ ಕನ್ನಡಿಗ ಬಿ. ಆರ್ ಶೆಟ್ಟಿಗೆ ಏನಾಯ್ತು? ಇದ್ದಕ್ಕಿದ್ದಂತೆ ಅವರು ತೆಗೆದುಕೊಂಡ ನಿರ್ಧಾರವಾದರೂ ಏನು ಗೊತ್ತಾ? ಅಬುದಾಬಿಯಲ್ಲಿ ತಾವೇ ಸ್ಥಾಪಿಸಿದ್ದ ಎನ್’ಎಂಸಿ ಹೆಲ್ತ್ ಬೋರ್ಡ್ ನ ಮುಖ್ಯಸ್ಥರಾಗಿದ್ದ ಬಿ. ಆರ್ ಶೆಟ್ಟಿ ಇದ್ದಕ್ಕಿದ್ದಂತೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಕೋಟ್ಯಾಂತರ ರೂಪಾಯಿ ವ್ಯವಹಾರ ನಡೆಸುತ್ತಿದ್ದ ಈ ಸಂಸ್ಥೆಯ ಮುಖ್ಯಸ್ಥರ ಮೇಲೆ ಇತ್ತೀಚೆಗೆ ಕೆಲವು ಆರೋಪಗಳು ಕೇಳಿ ಬಂದಿದ್ದವು. ಅದರಂತೆ ಫೆಬ್ರವರಿ ಎರಡನೇ ವಾರದಲ್ಲಿ ನಡೆದ ಸಭೆಯಲ್ಲಿ ಶೆಟ್ಟಿ ಅವರು ರಾಜೀನಾಮೆ ನೀಡುವಂತೆ ಒತ್ತಾಯಿಸಲಾಗಿತ್ತು.

ಶೆಟ್ಟಿ ಅವರ ಈ ಸಂಸ್ಥೆಯ ಹಣಕಾಸು ವ್ಯವಹಾರ ಪಾರದರ್ಶಕವಾಗಿಲ್ಲದೇ ಇರುವುದು ಇವರು ರಾಜೀನಾಮೆ ನೀಡಲು ಒತ್ತಾಯಿಸಲು ಒಂದು ಕಾರಣವಾದರೆ ಇವರ ಕಂಪನಿಯ ಷೇರುಗಳ ಮೌಲ್ಯ ಗಣನೀಯ ಪ್ರಮಾಣದಲ್ಲಿ ಇಳಿಕೆಯಾದದ್ದು ಕೂಡಾ ಇವರ ಸೋಲಿಗೆ ಕಾರಣವಾಯಿತು.

ಸಾಲ ಪಡೆಯಲು ಕಂಪನಿಯ ಷೇರುಗಳನ್ನು ವಿವಿಧ ಬ್ಯಾಂಕ್ ಗಳಲ್ಲಿ ಅಡಮಾನ ಇಡಲಾಗಿತ್ತು, ಆದರೆ ಇದನ್ನು ಮುಕ್ತವಾಗಿ ಹೇಳದೇ ಇರುವುದೂ ಕೂಡಾ ಸದಸ್ಯರ ಕೋಪಕ್ಕೆ ಕಾರಣವಾಗಿತ್ತು. ಹಾಗೂ ಬಹಳಷ್ಟು ಅವ್ಯವಹಾರಗಳು ಇಲ್ಲಿ ನಡೆದಿದೆ ಎಂದೆಲ್ಲಾ ಆರೋಪಿಸಿ ಇವರ ರಾಜೀನಾಮೆಗೆ ಒತ್ತಾಯಿಸಲಾಯಿತು.

LEAVE A REPLY

Please enter your comment!
Please enter your name here