ಶ್ರವಣಬೆಳಗೊಳ: ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ 71 ನೇ ವರ್ಧಂತಿ ಸಂಭ್ರಮ

ಪವಿತ್ರ ಯಾತ್ರಾಸ್ಥಳ ಹಾಗೂ ಐತಿಹಾಸಿಕ ಕ್ಷೇತ್ರವಾಗಿರುವ ಶ್ರವಣಬೆಳಗೊಳದ ಜೈನಮಠದ ಪ್ರಾಚೀನ ಧರ್ಮಪೀಠವನ್ನು ಅಲಂಕರಿಸಿರುವ ಜೈನಮಠದ ಪೀಠಾಧಿಪತಿಗಳಾದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಅವರ 71 ನೇ ವರ್ಧಂತಿ ಮಹೋತ್ಸವ ಸರಳವಾಗಿ ಜರುಗಿತು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಅಪರೂಪದ ಚಿತ್ರಸಂಪುಟ:

ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ವರಂಗದಲ್ಲಿ  ಮೇ 3, 1949ರಲ್ಲಿ ಜನಿಸಿದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಬಾಲ್ಯದ ಅಪರೂಪದ ಚಿತ್ರ. ಅಂದ ಹಾಗೆ ಶ್ರೀಗಳ ಪೂರ್ವಾಶ್ರಮದ ಹೆಸರು ರತ್ನವರ್ಮ.

ತಂದೆ ಶ್ರೀ ಚಂದ್ರರಾಜ ಇಂದ್ರ ಮತ್ತು ತಾಯಿ ಶ್ರೀಮತಿ ಶ್ರೀಕಾಂತಮ್ಮರವರೊಂದಿಗೆ ಶ್ರೀಗಳು

ತನ್ನ 20 ನೇ ವಯಸ್ಸಿನಲ್ಲಿ 1969 ಡಿಸೆಂಬರ್‌ 12 ರಂದು ಸನ್ಯಾಸ ದೀಕ್ಷೆ 

1970 ಎಪ್ರಿಲ್‌ 19 ರಂದು ನೂತನ ಸ್ವಾಮೀಜಿ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪಟ್ಟಾಭಿಷೇಕ ಸಂಭ್ರಮ

ಭಟ್ಟಾರಕರಾಗಿ ಪೀಠಾರೋಹಣ ಮಾಡಿದ ಮೇಲೂ, ಬೆಂಗಳೂರು ಮತ್ತು ಮೈಸೂರು ವಿವಿಗಳಲ್ಲಿ ಕ್ರಮವಾಗಿ ಇತಿಹಾಸ ಮತ್ತು ತತ್ವಶಾಸ್ತ್ರ ವಿಷಯಗಳಲ್ಲಿ  ಎಂಎ ಪದವಿ ಪಡೆದಿದ್ದಾರೆ.

ಕರ್ನಾಟಕದ ಅಂದಿನ ರಾಜ್ಯಪಾಲರಾದ ಗೋವಿಂದ ನಾರಾಯಣ್‌ ಜೊತೆ ಶ್ರೀಗಳು

ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವಕುಮಾರ ಸ್ವಾಮೀಜಿಗಳೊಂದಿಗೆ ಶ್ರೀಗಳು

90ರ ದಶಕದಲ್ಲಿ ಶ್ರೀಗಳು

ವಯಸ್ಸು ಮಾಗಿದರೂ ಕಲಿಯುವ ಆಸಕ್ತಿ ಬಿಡದ ಇವರು, ಈಗಲೂ ಓದುವ ಹವ್ಯಾಸದಿಂದ ವಿಮುಖರಾಗಿಲ್ಲ. ಸಂಸ್ಕೃತ, ಪ್ರಾಕೃತ ಭಾಷೆಯ ಪ್ರಮುಖ ಗ್ರಂಥಗಳನ್ನು ಕನ್ನಡಕ್ಕೆ ಅನುವಾದ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

LEAVE A REPLY

Please enter your comment!
Please enter your name here