ಶುಭ್ರತೆಯೇ ಕೊರೊನಾ ವೈರಸ್‍ಗೆ ಮದ್ದು.. ಸೋಂಕಿನಿಂದ ತಪ್ಪಿಸಿಕೊಳ್ಳಲು ಸರಳ ಉಪಾಯಗಳು

ಮಾರಕ ಕೊರೊನಾ ವೈರಸ್ ಮನೆ ಬಾಗಿಲಿಗೆ ಬಂದು ನಿಂತಿದೆ. ಅದಕ್ಕೆ ನೀವು ನಾಳೆ ಬಾ ಎನ್ನಬೇಕು.. ಹೇಗೆ ಅಂದ್ರಾ ಮುಂಜಾಗ್ರತೆ ಕ್ರಮಗಳ ಮೂಲಕರೀ..ಕೊರೊನಾ ಬಗ್ಗೆ ದಿನದಿಂದ ದಿನಕ್ಕೆ ಭಯ ಆತಂಕಗಳು ಹೆಚ್ಚುತ್ತಾ ಇರುವ ಸಂದರ್ಭದಲ್ಲಿ ವಾಸ್ತವವನ್ನು ತಿಳಿಸಿ, ತೆಗೆದುಕೊಳ್ಳಬೇಕಾದ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಕೊರೊನಾ ವೈರಸ್ ನಿಮ್ಮ ಹತ್ತಿರ ಸುಳಿಯದು ಎನ್ನುತ್ತಾರೆ ವೈದ್ಯರು.

* ಮೊದಲಿಗೆ ಕೊರೊನಾ ಎನ್ನುವುದು ವಿಷವಲ್ಲ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು. ವಿಷ ಅಲ್ಲದ ಕಾರಣ, ವೈರಸ್ ಸೋಂಕಿತರು ತಕ್ಷಣಕ್ಕೆ ಸಾಯುವುದಿಲ್ಲ. ಚೀನಾದಲ್ಲಿ ಸೋಂಕಿತರ ಪೈಕಿ ಸಾವನ್ನಪ್ಪಿದ್ದವರು ಶೇಕಡಾ 1ರಷ್ಟು ಮಾತ್ರ. ಬಹಳಷ್ಟು ಮಂದಿ ಸೋಂಕಿತರು ಚೇತರಿಸಿಕೊಳ್ಳುತ್ತಿದ್ದಾರೆ. ಸೋಂಕು ತಗುಲಿದರೇ, ಅದು 14 ದಿನಗಳಲ್ಲಿ ಬಯಲಾಗುತ್ತದೆ. ಇಲ್ಲದಿದ್ದರೇ ಸೋಂಕು ತಗುಲಿಲ್ಲ ಎಂದರ್ಥ.

* ಕೊರೊನಾ ವೈರಸ್ ಸೋಂಕು ಹರಡಲು ಯಾವುದಾದರೂ ಒಂದು ವಾಹಕ ಬೇಕು. ಇಲ್ಲದಿದ್ದರೇ ಸಾಯುತ್ತದೆ. ಉದಾಹರಣೆಗೆ ವೈರಸ್ ಸೋಕಿದ ಒಂದು ವಸ್ತುವನ್ನು ಯಾರು ಮುಟ್ಟದೇ ಇದ್ದರೇ, ಅದು ಮೂರರಿಂದ ಐದು ದಿನಗಳಲ್ಲಿ ಸಾವನ್ನಪ್ಪುತ್ತದೆ. ಅಂದರೆ, ಕೊರೊನಾ ವೈರಸ್ ಸೋಂಕಿತ ವ್ಯಕ್ತಿ ಬಳಸುವ ವಸ್ತುಗಳನ್ನು ಇತರರು ತಕ್ಷಣವೇ ಉಪಯೋಗಿಸಿದಲ್ಲಿ, ಸೋಂಕು ಹರಡುವ ಸಾಧ್ಯತೆ ಇರುತ್ತದೆ.

* ಒಂದು ವೇಳೆ, ಕೊರೊನಾ ವೈರಸ್ ನಮ್ಮ ಕೈಗಳಿಗೆ ಸೋಕಿದರೂ ಸಮಸ್ಯೆ ಇಲ್ಲ. ಆದರೆ, ಅದೇ ಕೈಯನ್ನು ಕಣ್ಣುಜ್ಜಿಕೊಳ್ಳಲು, ಮೂಗಿನಲ್ಲಿ ತೂರಿಸಿಕೊಳ್ಳಲು ಬಳಸಿದ್ರೆ ಮಾತ್ರ ಅಪಾಯ ಕಟ್ಟಿಟ್ಟ ಬುತ್ತಿ. ಪ್ರಮುಖವಾಗಿ ವೈರಸ್ ಮಾನವನ ದೇಹವನ್ನು ಪ್ರವೇಶಿಸುವುದೇ ಕಣ್ಣು, ಮೂಗಿನ ಮೂಲಕ. ಹೀಗಾಗಿ ಮೂಗಿಗೆ ಮಾಸ್ಕ್ ಧರಿಸುವುದು ಅತ್ಯಗತ್ಯ.

* ವಾಸ್ತವದಲ್ಲಿ ಮನುಷ್ಯನನ್ನು ಕೊಲ್ಲುವ ಶಕ್ತಿ ಈ ಕೊರೊನಾ ವೈರಸ್‍ಗೆ ಇಲ್ಲ. ಈಗಾಗಲೇ ಇರುವ ಹಲವು ಅನಾರೋಗ್ಯ ಸಮಸ್ಯೆಗಳ ಜೊತೆ ಇದು ಕೂಡ ಸೇರಿದರೇ ಆಗ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚು. ಉದಾಹರಣೆ 60 ವರ್ಷದ ವ್ಯಕ್ತಿ ಅತಿಸಾರದಿಂದ ಬಳಲುತ್ತಿದ್ದರೇ, ಅದು ಕಡಿಮೆ ಆಗಲ್ಲ. ಸಂಪೂರ್ಣ ಆರೋಗ್ಯದಿಂದ ಇರುವ ವ್ಯಕ್ತಿಗೆ ಕೊರೊನಾ ವೈರಸ್ ವ್ಯಾಪಿಸಿದರೇ, ಸಾವು ಸಂಭವಿಸುವ ಸಾಧ್ಯತೆಯೇ ಇರುವುದಿಲ್ಲ.

* ಶುಭ್ರತೆ ಇದ್ದರೇ ಶುಭಪ್ರದವಾಗಿ ಬದುಕಬಹುದು ಎಂದು ಹಿರಿಯರು ಹೇಳುತ್ತಲೇ ಇರುತ್ತಾರೆ. ವ್ಯಕ್ತಿಗತ ಶುಭ್ರತೆಗೆ ಆದ್ಯತೆ ನೀಡುವವರು ಸಾಮಾನ್ಯವಾಗಿ ಆರೋಗ್ಯವಂತರಾಗಿ ಇರುತ್ತಾರೆ. ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೊರೊನಾ ವೈರಸ್ ಅನ್ನು ಕೈಮುಗಿದು ದೂರಕ್ಕೆ ಅಟ್ಟಬಹುದು ಎನ್ನುತ್ತಾರೆ ವೈದ್ಯರು. ಕರಚಾಲನೆ (ಹ್ಯಾಂಡ್ ಶೇಕ್) ಮಾಡದಿದ್ದರೇ ಒಳಿತು ಎನ್ನುತ್ತಾರೆ ವೈದ್ಯರು.

LEAVE A REPLY

Please enter your comment!
Please enter your name here