ಶಿವಮೊಗ್ಗ ಜನತೆಯಲ್ಲಿ ಜಿಲ್ಲಾಧಿಕಾರಿ ಮನವಿ – ಈ ಫೋನ್‌ಗೆ ಕರೆ ಮಾಡಿ ಮಾಹಿತಿ ನೀಡಿ..!

ಜನವರಿ 29ರಂದು ಭಾರತದಲ್ಲಿ ಮೊದಲ ಕೊರೋನಾ ಕೇಸ್‌ (ಮೊದಲ ಕೊರೋನಾ ಕೇಸ್‌ ವರದಿ ಆಗಿದ್ದು ಕೇರಳದಲ್ಲಿ) ವರದಿ ಆದ ಬಳಿಕ ಒಂದೇ ಒಂದು ಕೊರೋನಾ ಕೇಸ್‌ಗೆ ಪತ್ತೆ ಆಗದೇ ಇದ್ದ ಶಿವಮೊಗ್ಗ ಜಿಲ್ಲೆಯಲ್ಲಿ ನಿನ್ನೆ ಒಂದೇ ದಿನ 8 ಕೊರೋನಾ ಪಾಸಿಟಿವ್‌ ಕೇಸ್‌ ವರದಿ ಆಗಿದೆ.

ಗುಜರಾತ್‌ನಿಂದ ಬಂದ 9 ಮಂದಿ ತಬ್ಲಿಘಿಗಳಲ್ಲಿ 8ಮಂದಿಗೆ ಕೊರೋನಾ ಇರೋದು ದೃಢ ಪಟ್ಟಿದೆ. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ಮತ್ತಷ್ಟು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.

ನಿಮ್ಮ ಊರಿಗೆ, ಪಕ್ಕದ ಮನೆಗೆ ಹೊರ ಜಿಲ್ಲೆ ಅಥವಾ ಹೊರರಾಜ್ಯಗಳಿಂದ ಯಾರಾದರೂ ಬಂದರೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಶಿವಕುಮಾರ್‌ ಮನವಿ ಮಾಡಿದ್ದಾರೆ.

ಒಂದು ವೇಳೆ ಯಾರಾದರೂ ಹೊರರಾಜ್ಯ ಅಥವಾ ಹೊರಜಿಲ್ಲೆಗಳಿಂದ ಬಂದಿದ್ದರೆ ಅವರ ಬಗ್ಗೆ 08182-221010 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಿ, ಆ ಮೂಲಕ ಕೊರೋನಾ ಹೋರಾಟದಲ್ಲಿ ಕೈಜೋಡಿಸುವಂತೆ ಕರೆ ನೀಡಿದ್ದಾರೆ.

LEAVE A REPLY

Please enter your comment!
Please enter your name here