ಸಂಕ್ರಾಂತಿ ಹಬ್ಬದ ಹೊತ್ತಲ್ಲಿ ಕನ್ನಡ ಸಿನಿಮಾ ಲೋಕದಲ್ಲಿ ಮೋಷನ್ ಪೋಸ್ಟರ್ಗಳು ಮತ್ತು ಫಸ್ಟ್ಲುಕ್ಗಳದ್ದೇ ಹಬ್ಬ. ಎರಡು ದಿನಗಳಲ್ಲಿ ನಮ್ಮ ಸಿನಿಮಾ ಜಗತ್ತಿನ ಘಟಾನುಘಟಿಗಳಾದ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಸಿನಿಮಾಗಳ ಹೊಸ ಹೊಸ ಲುಕ್ಗಳು ಬಿಡುಗಡೆ ಆಗಿವೆ.
ಭಜರಂಗಿ ಸೂಪರ್ ಹಿಟ್ ಸಿನಿಮಾ ಬಳಿಕ ಈಗ ಭಜರಂಗಿ ೨ನಲ್ಲಿ ಶಿವಣ್ಣ ಹೊಸ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಹಣೆಗೆ ನಾಮಧಾರಿ ಆಗಿರುವ ಸೆಂಚುರಿಸ್ಟಾರ್ಗೆ ಎದುರು ಮುಖವಾಗಿ ಉದ್ದನೆಯ ಜುಟ್ಟು ಬಿಟ್ಟಿರುವ ಜನಿವಾರಧಾರಿ ಬ್ರಾಹ್ಮಣರೊಬ್ಬರು ಆರತಿ ಹಿಡಿದಿದ್ದಾರೆ. ಈ ಸಿನಿಮಾಕ್ಕೆ ಎ ಹರ್ಷ ಆಕ್ಷನ್ ಕಟ್ ಹೇಳ್ತಿದ್ದಾರೆ.
ನಿನ್ನೆ ಸಂಕ್ರಾಂತಿಯ ಶುಭ ಗಳಿಗೆಯಲ್ಲಿ ಬಿಡುಗಡೆ ಆದ ಮೋಷನ್ ಪೋಸ್ಟರ್ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ ಕೋಟಿಗೊಬ್ಬದ ಮೂರನೇ ಭಾಗ. ಕೋಟಿಗೊಬ್ಬ ೩ ಪೋಸ್ಟರ್ನಲ್ಲಿ ಪೈಲ್ವಾನ್ ಲುಕ್ಗಳಲ್ಲೇ ಡಿಫರೆಂಟ್ ಆಗಿವೆ.
ಇನ್ನು ಡಿ ಬಾಸ್. ತಮ್ಮ ಸಮಸ್ತ ಸಿನಿಮಾಭಿಮಾನಿಗಳಿಗೆ ರಾಬರ್ಟ್ ಸಿನಿಮಾದ ಹೊಸ ಮೋಷನ್ ಪೋಸ್ಟರ್ ಮೂಲಕ ಸಿಹಿ ಬಡಿಸಿದ್ದಾರೆ ದರ್ಶನ್.
ಕಿಚ್ಚ ಸುದೀಪ್ ಮತ್ತು ದರ್ಶನ್ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡುತ್ತಿರುವು ಖ್ಯಾತ ಅರ್ಜುನ್ ಜನ್ಯಾ ಅವರೇ.
ಈ ಮೂರು ಪೋಸ್ಟರ್ಗಳಲ್ಲಿ ನಿಮಗೆ ಅತ್ಯಂತ ಇಷ್ಟ ಆಗಿದ್ದು ಯಾವುದು..? ನಮ್ಮ ವೆಬ್ಸೈಟ್ನಲ್ಲಿ ಕಮೆಂಟ್ ಮಾಡಿ.