ಶಾಸಕ ಸುನೀಲ್ ಕುಮಾರ್ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ: ಹಿರ್ಗಾನ

ಕಾರ್ಕಳ: ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೇನೆ ಎಂದು ರಾಧಾಕೃಷ್ಣ ಹಿರ್ಗಾನ ಹೇಳಿದ್ದಾರೆ.

ತನ್ನ ಮೇಲೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ದೇಶದ್ರೋಹದ ಪ್ರಕರಣ ದಾಖಲಾಗದಿದ್ದರೂ ಕಾರ್ಕಳ ಶಾಸಕ ವಿ ಸುನೀಲ್ ಕುಮಾರ್ ಹಾಗೂ ಬಿಜೆಪಿ ಪದಾಧಿಕಾರಿಗಳು ದೇಶದ್ರೋಹದ ಹೇಳಿಕೆ ನೀಡಿದ್ದು, ಇದರಿಂದ ನನಗೆ ಬೇಸರವಾಗಿದೆ.

ಈ ಹಿನ್ನಲೆ ನನ್ನ ಘನತೆಗೆ ಧಕ್ಕೆ ಬರುವಂತೆ ಮಾಡಿರುವ ಅವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಲಿದ್ದೆನೆ ಎಂದು ರಾಧಾಕೃಷ್ಣ ಹಿರ್ಗಾನ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇನಾದರು ದೇಶದ್ರೋಹ ಪೋಸ್ಟ್ ಹಾಕಿದ ಕೆಲಸ ಮಾಡಿದ್ದರೆ, ಸೈನಿಕರಿಗೆ ಅವಹೇಳನ ಮಾಡಿದ್ದರೆ ಯಾವುದೇ ಶಿಕ್ಷೆ ಅನುಭವಿಸಲು ಸಿದ್ದ. ಗಲ್ಲಿಗೇರಲು ಸಿದ್ದನಿದ್ದೇನೆ. ಆದರೆ ಶಾಸಕರು ಅಥವಾ ಅವರ ಯಾರೇ ಪದಾಧಿಕಾರಿಗಳು ಯಾವುದೇ ಪವಿತ್ರ ಸ್ಥಳದಲ್ಲಿ ಪ್ರಮಾಣಿಕರು ಸಿದ್ದರಿದ್ದಾರೆಯೇ ಎಂದು ಸವಾಲು ಹಾಕಿದ್ದಾರೆ.

ಈ ಹಿಂದೆ ನಾನು ಮೂರ್ನಾಲ್ಕು ಬಾರಿ ಠಾಣೆಗೆ ಹಾಜರಾದ ಸಂದರ್ಭ ಒಂದು ಬಾರಿ ನನ್ನ ಹೇಳಿಕೆಯನ್ನು ಪಡೆದಿದ್ದು, ಪ್ರತಿ ಬಾರಿಯೂ ಸಂದರ್ಶಕರ ಪುಸ್ತಕದಲ್ಲಿ ಸಹಿ ಹಾಕಿದ್ದೆ. ಅದಾಗ್ಯೂ ತಾನು ತಲೆ ಮರೆಸಿಕೊಂಡಿದ್ದೆ ಎಂದು ಶಾಸಕರು ಸುಳ್ಳು ಹೇಳಿದ್ದಾರೆ ಎಂದು ರಾಧಾಕೃಷ್ಣ ನಾಯಕ್ ಆರೋಪಿಸಿದರು.

ಸಾಮಾಜಿಕ ಜಾಲತಾಣದಲ್ಲಿ ಯೋಧರ ವಿರುದ್ಧ ಪೋಸ್ಟ್ ವಿಚಾರಕ್ಕೆ ಸಂಬಂಧಿಸಿ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ವಿಚಾರಣೆ ಸಂದರ್ಭದಲ್ಲಿ ರಾಧಾಕೃಷ್ಣ ನಾಯಕ್ ಅವರಿಗೆ ಕಾರ್ಕಳ ಟೌನ್ ಎಸ್ ಐ ಮಧು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

LEAVE A REPLY

Please enter your comment!
Please enter your name here