ಶಾಸಕರಿಗೊಂದು ಸಂಘ ಬೇಕಂತೆ – ಭುಗಿಲೆದ್ದ ಬಿಜೆಪಿ ಶಾಸಕರ ಆಕ್ರೋಶ

ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಸರ್ಕಾರದ ವಿರುದ್ಧವೇ ಬಿಜೆಪಿಯ ೬೦ಕ್ಕೂ ಹೆಚ್ಚು ಶಾಸಕರು ವಿಧಾನಸಭೆಯಲ್ಲಿ ಪ್ರತಿಭಟಿಸಿದ್ದು ಪಕ್ಷದ ಮುಜುಗರಕ್ಕೆ ಕಾರಣವಾಗಿದೆ.

ಪೊಲೀಸ್‌ ಅಧಿಕಾರಿಗಳು ತಮ್ಮೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿದ ಲೋನಿ ಕ್ಷೇತ್ರದ ಬಿಜೆಪಿ ಶಾಸಕ ನಂದಕಿಶೋರ್‌ ಗುರ್ಜಾರ್‌ ತಮಗೆ ಮಾತಾಡಲು ಅವಕಾಶ ನೀಡುವಂತೆ ಮನವಿ ಮಾಡಿಕೊಂಡರು. ಆದರೆ ವಿಧಾನಸಭೆ ಸ್ಪೀಕರ್‌ ಅವಕಾಶ ಕೊಡಲಿಲ್ಲ. ಆಡಳಿತ ಪಕ್ಷದ ಶಾಸಕನಾಗಿದ್ದರೂ ತಮಗೆ ಅವಕಾಶ ಕೊಡಲಿಲ್ಲ ಎಂದರೆ ಹೇಗೆ ಗುರ್ಜಾರ್‌ ಪ್ರಶ್ನಿಸಿ ಪ್ರತಿಭಟನೆಗೆ ಇಳಿದರು. ಅವರಿಗೆ ಅವರದ್ದೇ ಪಕ್ಷದ ೬೦ ಮಂದಿ ಶಾಸಕರ ಜೊತೆಗೆ ಕಾಂಗ್ರೆಸ್‌ ಮತ್ತು ಸಮಾಜವಾದಿ ಪಕ್ಷದ ೪೦ ಶಾಸಕರೂ ಜೊತೆಯಾದರು.

ತಮ್ಮ ಜೊತೆಗೆ ಅನುಚಿತವಾಗಿ ವರ್ತಿಸಿದ ಅಧಿಕಾರಿಗಳನ್ನು ವಿಧಾನಸಭೆಗೆ ಕರೆಸಿ ಕ್ಷಮೆಯಾಚಿಸಬೇಕು ಎಂಬ ಪಟ್ಟನ್ನು ಹಿಡಿದರು. ಯೋಗಿ ಆದಿತ್ಯನಾಥ್‌ ಸರ್ಕಾರದ ಹಿರಿಯ ಸಚಿವರ ಸಂಧಾನದ ಬಳಿಕ ನಾಲ್ಕು ಗಂಟೆಗಳ ಪ್ರತಿಭಟನೆಯನ್ನು ಶಾಸಕರು ವಾಪಸ್‌ ಪಡೆದರು.

ಶಾಸಕರು ಸಂಘ ಕಟ್ಟಿಕೊಳ್ಳಬೇಕು:

ನಿನ್ನೆಯ ಘಟನೆ ಬಳಿಕ ಉತ್ತರಪ್ರದೇಶದ ಹೃದೋಯಿ ಕ್ಷೇತ್ರದ ಶಾಸಕ ಶ್ಯಾಮ್‌ ಪ್ರಕಾಶ್‌ ವಿಚಿತ್ರ ಪ್ರಸ್ತಾಪವೊಂದನ್ನು ಮುಂದಿಟ್ಟಿದ್ದಾರೆ.

ಗುಮಾಸ್ತನಿಂದ ಹಿಡಿದು ಐಎಎಸ್‌ ಅಧಿಕಾರಿಗಳವರೆಗೆ ಹೋಮ್‌ ಗಾರ್ಡ್‌ಗಳಿಂದ ಹಿಡಿದು ಐಪಿಎಸ್‌ ಅಧಿಕಾರಿಗಳವರೆಗೆ ಎಲ್ಲ ಇಲಾಖೆಯ ಅಧಿಕಾರಿಗಳು, ನೌಕರರು, ರೈತರು, ಉದ್ಯಮಿಗಳಿಗೆ ಅವರದ್ದೇ ಆದ ಸಂಘವಿದೆ. ಅದೇ ರೀತಿ ಶಾಸಕರ ಹಕ್ಕು ರಕ್ಷಣೆಗೆ ಅವರದ್ದೇ ಆದ ಸಂಘ ಬೇಡ್ವಾ..? ಯಾಕಂದ್ರೆ ಇವತ್ತಿನ ರಾಜಕೀಯದಲ್ಲಿ ಶಾಸಕರ ಅತ್ಯಂತ ದುರ್ಬಲರಾಗುತ್ತಿದ್ದಾರೆ ಎಂದು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

ಗಾಜಿಯಾಬಾದ್‌ನಲ್ಲಿ ಮಾಂಸ ಕೊಡುತ್ತಿದ್ದ ಹೋಟೆಲ್‌ವೊಂದನ್ನು ಮುಚ್ಚಲು ನಿರಾಕರಿಸಿದ ಆಹಾರ ಆಧೀಕ್ಷಕನ ಮೇಲೆ ಶಾಸಕ ಗುರ್ಜಾರ್‌ ಹಲ್ಲೆ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಮೇಲೆ ಕೇಸ್‌ ದಾಖಲಾಗಿತ್ತು.

LEAVE A REPLY

Please enter your comment!
Please enter your name here