ಶಾಲಾ ಕಾಲೇಜು ಇರೋದು ಏತಕ್ಕೆ..? ಓದಿಕೊಳ್ಳುವುದಕ್ಕೆ.. ವಿದ್ಯಾವಂತರಾಗುವುದಕ್ಕೆ.. ಪ್ರತಿಭಟನೆ, ಹೋರಾಟ, ಧರಣಿ ಮಾಡಲು ಅಲ್ಲ.. ಇನ್ಮುಂದೆ ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆ ಮಾಡುವಂತಿಲ್ಲ.. ಕ್ಯಾಂಪಸ್ ರಾಜಕೀಯಕ್ಕೆ ನಿಷೇಧ ಹೇರುತ್ತಿದ್ದೇವೆ ಎಂದು ಕೇರಳ ಹೈಕೋರ್ಟ್ ಸಂಚಲನಾತ್ಮಕ ತೀರ್ಪು ನೀಡಿದೆ.
ಕ್ಯಾಂಪಸ್ ರಾಜಕೀಯ, ಪ್ರತಿಭಟನೆಗಳ ವಿರುದ್ಧ 20ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಶಾಲಾ ಕಾಲೇಜುಗಳಲ್ಲಿ ಪ್ರತಿಭಟನೆಗಳಿಗೆ ನಿಷೇಧ ಹೇರಿ ಆದೇಶ ನೀಡಿತು.
ಪ್ರತಿಭಟನೆಗಳ ಕಾರಣದಿಂದ ಶಾಲಾ ಕಾಲೇಜುಗಳ ಕ್ಯಾಂಪಸ್ ವಾತಾವರಣ ಹಾಳಾಗಬಾರದು. ಕಾಲೇಜುಗಳು ಇರುವುದು ಓದಿಕೊಳ್ಳುವುದಕ್ಕೆ. ಪ್ರತಿಭಟನೆ ಮಾಡಲು ಅಲ್ಲ. ಕ್ಯಾಂಪಸ್ನಲ್ಲಿ ಮಾರ್ಚಿಂಗ್, ಘೇರಾವ್ ಮಾಡಬಾರದು. ಪ್ರತಿಭಟನೆಗೆ ಯಾರನ್ನೂ ಪ್ರಚೋದಿಸಬಾರದು.
ಒಂದು ವೇಳೆ ಕೋರ್ಟ್ ಆದೇಶ ಉಲ್ಲಂಘಿಸುವಂತಹ ಚಟುವಟಿಕೆಗಳು ನಡೆದರೇ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು.. ಪೊಲೀಸರನ್ನು ಕರೆಯಿಸಿ ಶಾಂತಿ ಮರುಸ್ಥಾಪನೆ ಮಾಡಬೇಕು ಎಂದು ನ್ಯಾಯಮೂರ್ತಿ ಪಿಬಿ ಸುರೇಶ್ ಆದೇಶ ನೀಡಿದ್ದಾರೆ.