ಶಾಪಿಂಗ್‌ಗೆ ಸಿಗೋದು ಒಂದೇ ದಿನ ಅದು ಭಾನುವಾರ – ಕರ್ಫ್ಯೂ ತೆರವು ಬಗ್ಗೆ ಸಚಿವ ಆರ್ ಅಶೋಕ್‌‌ ಸಮರ್ಥನೆ

ವಾರವಿಡೀ ಕೆಲಸ ಮಾಡಿದ ಜನ ಭಾನುವಾರ ಶಾಪಿಂಗ್‌ಗೆ ಮನೆಯಿಂದ ಹೊರಬಂದರೆ ಕಷ್ಟ ಎಂದು ಭಾವಿಸಿದ್ದ ರಾಜ್ಯ ಸರ್ಕಾರ ಭಾನುವಾರ ಜನತಾ ಕರ್ಫ್ಯೂ ಮಾದರಿಯಲ್ಲೇ ಸಂಪೂರ್ಣ ಲಾಕ್‌ಡೌನ್‌ ಹೇರಿತ್ತು. ಈಗ ಒಂದೇ ವಾರಕ್ಕೆ ತನ್ನ ವರಸೆ ಬದಲಿಸಿಕೊಂಡಿರುವ ರಾಜ್ಯ ಸರ್ಕಾರ ಭಾನುವಾರ ಶಾಪಿಂಗ್‌ ಮಾಡುವಂತೆ ಜನರಿಗೆ ಕರೆ ನೀಡಿದೆ. ಈ ಮೂಲಕ ಲಾಕ್‌ಡೌನ್‌ ಜಾರಿ ವಿಷಯದಲ್ಲಿ ರಾಜ್ಯ ಸರ್ಕಾರದ ಗೊಂದಲ ಮುಂದುವರಿದಿದೆ.

ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾತಾಡಿದ ಕಂದಾಯ ಸಚಿವ ಆರ್‌ ಅಶೋಕ್‌ ಭಾನುವಾರ ಕರ್ಫ್ಯೂ ತೆಗೆದಿರುವ ಸಿಎಂ ನಿರ್ಧಾರ ಸ್ವಾಗತಾರ್ಹ. ವಾರವೆಲ್ಲ ನೌಕರರು, ಉದ್ದಿಮೆದಾರರು ಕೆಲಸ ಮಾಡಿರುತ್ತಾರೆ. ಅವರಿಗೆ ಶಾಪಿಂಗ್‌ ಮಾಡಲು ಅವಕಾಶ ಇರುವುದು ಭಾನುವಾರ ಒಂದೇ ದಿನ. ಹೀಗಾಗಿ ಭಾನುವಾರ ಖರೀದಿಗೆ, ಸ್ನೇಹಿತರಿಗೆ ಭೇಟಿ ಆಗಲು ಅವಕಾಶ ಬೇಕಿತ್ತು. ಅದಕ್ಕೆ ಭಾನುವಾರ ಕರ್ಫ್ಯೂ ತೆಗೆಯಲಾಗಿದೆ ಎಂದು ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ.

ಮಾಲ್‌, ಥಿಯೇಟರ್‌ ಓಪನ್‌ ಸದ್ಯಕ್ಕೆ ಇಲ್ಲ:

ಲಾಕ್ ಡೌನ್ ಫ್ರೀ ಮಾಡಲು ರಾಜ್ಯ ಸರ್ಕಾರ ಮುಕ್ತವಾಗಿದೆ. ಸೋಮವಾರದಿಂದ ಬಹುತೇಕ ಎಲ್ಲವೂ ಮುಕ್ತ ಆಗುತ್ತದೆ. ಆದರೆ ಮಾಲ್, ಸಿನಿಮಾ ಥಿಯೇಟರ್ ಸದ್ಯಕ್ಕೆ ಓಪನ್‌ ಇರಲ್ಲ. ಹೋಟೆಲ್ ಸೇರಿದಂತೆ ಹಲವು ವಲಯಗಳಿಗೆ ವಿನಾಯ್ತಿ ಸಿಗಲಿದೆ. ರಾಜ್ಯ ಸರ್ಕಾರಕ್ಕೆ ಕೇಂದ್ರ ಅಧಿಕಾರ ಕೊಟ್ಟರೆ ನಾವೇ ನಿರ್ಧಾರ ತೆಗೆದುಕೊಳ್ಳುತ್ತೇವೆ. ಕೇಂದ್ರ ಸರ್ಕಾರದ ಸೂಚನೆಗೆ ಕಾಯುತ್ತಿದ್ದೇವೆ ಎಂದು ಅಶೋಕ್‌ ಹೇಳಿದರು.

LEAVE A REPLY

Please enter your comment!
Please enter your name here