ಶವಸಂಸ್ಕಾರಕ್ಕೆ ಅಡ್ಡಿ – ಮೋದಿ ಸರ್ಕಾರದ ಸುಗ್ರೀವಾಜ್ಞೆ ಪ್ರಕಾರ ಬಿಜೆಪಿ ಶಾಸಕ ಭರತ್‌ ಶೆಟ್ಟಿ ವಿರುದ್ಧ ಕ್ರಮಕೈಗೊಳ್ಳಿ

ದಕ್ಷಿಣ ಕನ್ನಡದಲ್ಲಿ ಕೊರೋನಾಗೆ ಬಲಿ ಆದ 78 ವರ್ಷದ ವೃದ್ಧೆಯ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಬಿಜೆಪಿ ಶಾಸಕ ಡಾ. ಭರತ್‌ ಶೆಟ್ಟಿ ವಿರುದ್ಧ ಕ್ರಮಕೈಗೊಳ್ಳುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕೊರೋನಾ ವಾರಿಯರ್ಸ್‌ ರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಂದಿರುವ ಸುಗ್ರೀವಾಜ್ಞೆಯಡಿಯೇ ಕ್ರಮಕೈಗೊಳ್ಳುವಂತೆ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪಗೆ ಆಗ್ರಹಿಸಿದ್ದಾರೆ.

ಮಂಗಳೂರಿನ ಪಚ್ಚನಾಡಿಯಲ್ಲಿ ಶವ ಸಂಸ್ಕಾರಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಪ್ರತಿಭಟನೆಯಲ್ಲಿ ಸ್ವತಃ ಶಾಸಕ ಭರತ್‌ ಶೆಟ್ಟಿ ಭಾಗಿ ಆಗಿದ್ದು ಟೀಕೆಗೆ ಕಾರಣವಾಗಿದೆ.

ಶವಸಂಸ್ಕಾರದ ಬಗ್ಗೆ ಜನ ಗೊಂದಲಕ್ಕೀಡಾದಾಗ ಶಾಸಕರಾಗಿ ಡಾ ವೈ ಭರತ್‌ ಶೆಟ್ಟಿ ಗೊಂದಲವನ್ನು ಬಗೆಹರಿಸಬೇಕಿತ್ತು. ಆದರೆ ಶಾಸಕರೇ ಪ್ರತಿಭಟನೆಯಲ್ಲಿ ಭಾಗಿ ಆಗಿ ಶವಸಂಸ್ಕಾರಕ್ಕೆ ಅಡ್ಡಿಪಡ್ಡಿಸಿದ್ರೆ ಜನರನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವುದು ಯಾರು..? ಎಂದು ಮಾಜಿ ಸಚಿವ ಯುಟಿ ಖಾದರ್‌ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here