ವೈರಲ್ ಆಯ್ತು ಪುಟ್ಟ ಮಗುವಿನ ಅಡುಗೆ ರೆಸಿಪಿ

ಸತ್ಯಸಾಕ್ಷಿ ತುಮರಿ

ಮಕ್ಕಳು ಏನು ಮಾಡಿದರೂ ಚಂದ, ಮಕ್ಕಳ ಮಾತು, ನಗು ಎಲ್ಲವೂ ಮನಸ್ಸಲ್ಲಿ ಎಷ್ಟೇ ದುಃಖ ಇದ್ದರೂ ದೂರಾಗಿಸಿ ಬಿಡುತ್ತದೆ. ಇತ್ತೀಚೆಗೆ ಮಕ್ಕಳ ತುಂಟಾಟದ ಅದೆಷ್ಟೋ ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿ ನೋಡುಗರಿಗೆ ಹಬ್ಬ ನೀಡುತ್ತಿವೆ.

ಇಂತಹ ವೀಡಿಯೋಗಳಲ್ಲಿ ಪುಟ್ಟ ಮಗುವೊಂದು ಹೇಳಿಕೊಡುವ ಅಡುಗೆ ರೆಸಿಪಿಯೂ ಒಂದು.ಈ ಮಗು ಯಾರದ್ದು? ಯಾವ ಊರಿನದು ಎಂಬುದು ಗೊತ್ತಿಲ್ಲ ಆದರೆ ಮಗ ಹೇಳಿದ ರೆಸಿಪಿ ಮಾತ್ರ ಬಾಯಲ್ಲಿ ನೀರೂರಿಸುತ್ತದೆ.

ಬಹಳಷ್ಟು ಹಣ್ಣುಗಳ ಸಿಪ್ಪೆಯನ್ನು ಹಾಕಿ ಪಲ್ಯ ಮಾಡುವುದು ಹೇಗೆ ಎಂದು ಈ ಪುಟ್ಟ ಹುಡುಗಿ ಹೇಳಿಕೊಟ್ಟಿದ್ದಾಳೆ. ಹೇಳುವಾಗ ಆಕೆಯ ಹಾವಭಾವವನ್ನು ನೋಡಿದರೆ ಪ್ರೊಫೆಶನಲ್ ಅಡುಗೆಯವರಂತೆ ತೋರುತ್ತದೆ.

ಆದರೆ ಆಕೆ ತನಗೆ ತೋಚಿದಂತೆ ತಮಾಷೆ ಮಾಡಿದ್ದು ವೀಡಿಯೋದಲ್ಲಿ ಸ್ಪಷ್ಟವಾಗಿದೆ. ಈ ಮಗುವಿನ ಮಾತಿನ ಮೋಡಿಗೆ ಮರುಳಾದ ಜನ ಈ ವೀಡಿಯೋ ಮಾಡಿದವರಿಗೂ ಮತ್ತು ಆ ಮಗುವಿಗೂ ಕೃತಜ್ಞತೆ ಸೂಚಿಸಿದ್ದಾರೆ.

LEAVE A REPLY

Please enter your comment!
Please enter your name here