ವೇಯ್ಟ್ ಲಾಸ್ ಮಾಡಲು ನಿಷೇಧಿತ ಪಿಲ್ ನುಂಗಿದ ಡ್ಯಾನ್ಸರ್.. ಕೆಲವು ಗಂಟೆಗೆಲ್ಲಾ..!?

ದೇಹದ ಭಾರ ಕಳೆದುಕೊಂಡು ಸ್ಲಿಮ್ ಆಗಿ ಕಾಣಲು ಲೇಡಿ ಡ್ಯಾನ್ಸರ್ ಮಾಡಿದ ಕಸರತ್ತು ಅವರ ಪ್ರಾಣಕ್ಕೆ ಎರವಾಗಿದೆ. ನಿಷೇಧಿತ ಡ್ರಗ್ ಎಂದು ತಿಳಿದರೂ ಕೂಡ, ಆಕೆ ಅದನ್ನು ಬಳಸುವ ಸಾಹಸಕ್ಕೆ ಮುಂದಾಗಿದ್ದೆ ಇಷ್ಟಕ್ಕೆಲ್ಲ ಕಾರಣವಾಗಿದೆ.

ಥಾಣೆಯ ಮೇಘನಾ ದೇವಗಡ್ಕರ್(22) ವೃತ್ತಿಯಲ್ಲಿ ಡ್ಯಾನ್ಸರ್. ಶರೀರಾಕೃತಿ ವಿಚಾರದಲ್ಲಿ ತುಂಬಾನೆ ಜಾಗ್ರತೆ ವಹಿಸುತ್ತಿದ್ದರು. ಸ್ವಲ್ಪ ದಪ್ಪ ಇದ್ದ ಆಕೆ, ದಿನವೂ ದೇಹದ ತೂಕ ಇಳಿಸಲು ಜಿಮ್‍ನಲ್ಲಿ ಕಸರತ್ತು ಮಾಡುತ್ತಿದ್ದರು. ಆದರೂ, ಶರೀರಾಕೃತಿ ವಿಚಾರದಲ್ಲಿ ಮೇಘನಾಗೆ ಸಂತೃಪ್ತಿ ಅನ್ನುವುದು ಇರಲಿಲ್ಲ. ಮೊನ್ನೆ ಸಂಜೆ ಜಿಮ್‍ನಲ್ಲಿ ವರ್ಕೌಟ್ ಮಾಡೋ ಮುನ್ನ ನಿಷೇಧಿತ ಪಿಲ್ ಸೇವಿಸಿದ್ದ ಮೇಘನಾ ಕೆಲವೇ ಗಂಟೆಗಳಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ.

ರಸಗೊಬ್ಬರ, ಬಣ್ಣ, ಸ್ಫೋಟಕ ಪದಾರ್ಥಗಳನ್ನು ತಯಾರಿಸಲು ಬಳಸುವ ಕೆಮಿಕಲ್‍ನಿಂದ ಆ ಪಿಲ್ ತಯಾರಿಸಲಾಗಿದ್ದು, ಆ ಮಾತ್ರೆ ನುಂಗಿದರೆ, ದೇಹದ ಉಷ್ಣಾಂಶ ಕೂಡಲೇ ಏರಿಕೆ ಆಗುತ್ತದೆ. ಶರೀರದಲ್ಲಿನ ಕೊಬ್ಬನ್ನು ಕರಗಿಸುವ ಕ್ರಮದಲ್ಲಿ ದೇಹದ ಉಷ್ಣಾಂಶ ವಿಪರೀತವಾಗಿ ಹೆಚ್ಚುತ್ತದೆ. ಈ ಸಂದರ್ಭದಲ್ಲಿ ಮನುಷ್ಯನ ಪ್ರಾಣ ಹೋಗುವ ಸಾಧ್ಯತೆ ಇರುತ್ತದೆ. ಹೀಗಾಗಿಯೇ ಆ ಪಿಲ್ ಅನ್ನು ನಿಷೇಧಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಆ ಪಿಲ್ ತೆಗೆದುಕೊಂಡ ಕೂಡಲೇ ದೇಹದ ಉಷ್ಣತೆ ಹೆಚ್ಚಿ, ಬೆವರು ಕಿತ್ತು ಬಂದು, ವಿಪರೀತ ವಾಂತಿ ಆಗಿ ಮೇಘನಾ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಮೇಘನಾಗೆ ಆ ಪಿಲ್ ಹೇಗೆ ಸಿಕ್ಕಿತು ಎಂಬ ಬಗ್ಗೆ ಫುಡ್ ಅಂಡ್ ಡ್ರಗ್ ಕಂಟ್ರೋಲ್ ಅಡ್ಮಿನಿಸ್ಟ್ರೇಷನ್ ತನಿಖೆ ನಡೆಸುತ್ತಿದೆ. ಡ್ರಗ್ ಹೆಸರು ಬದಲಿಸಿ ಆನ್‍ಲೈನ್ ನಿಷೇಧಿತ ಪಿಲ್ ಮಾರಾಟ ದಂಧೆ ನಡೆಯುತ್ತಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಮೇಘನಾ ಸಹ ಆನ್‍ಲೈನ್‍ನಲ್ಲಿ ಆ ಪಿಲ್ ಖರೀದಿ ಮಾಡಿದರಾ ಅಥವಾ ಮೆಡಿಕಲ್ ಶಾಪ್‍ನಲ್ಲಿ ಖರೀದಿ ಮಾಡಿದರಾ ಅನ್ನುವ ಬಗ್ಗೆ ಥಾಣೆ ಪೊಲೀಸರು ತನಿಖೆ ಮಾಡುತ್ತಿದ್ದಾರೆ.
ದೇಹದ ತೂಕ ಇಳಿಸಲು ಸೋಷಿಯಲ್ ಮೀಡಿಯಾದಲ್ಲಿ ಕಂಡು ಬಂದಿದ್ದನ್ನೆಲ್ಲಾ ಟ್ರೈ ಮಾಡೋಕೆ ಹೋಗುವ ಮುನ್ನ ಎಚ್ಚರ ಇರಲಿ.

LEAVE A REPLY

Please enter your comment!
Please enter your name here