ವಿಸ್ಮಯ.. ಹಗಲು ರಾತ್ರಿಗಳ ಗಡಿ ರೇಖೆ ನೋಡಿ..

ಹಗಲು.. ರಾತ್ರು.. ಭೂಮಿ ಮೇಲಿನ‌ ಸಹಜ ಪ್ರಕ್ರಿಯೆ. ಸುಪ್ರಭಾತ ವೇಳೆಯಲ್ಲಿ ಸೂರ್ಯ ಬಂಗಾರದ ಬಣ್ಣದಲ್ಲಿ ಉದಯಿಸುವಾಗ ಅದರಿಂದ ಹೊಮ್ಮುವ ಕಿರಣಗಳು ಭೂಮಾತೆಯನ್ನು ತಾಕಿದಾಗ ಪ್ರಕೃತಿ ಸಂಭ್ರಮಿಸುತ್ತದೆ.ಕೆಲ ವಿಶೇಷ ಅನಿಲಗಳು ಬಿಡುಗಡೆಯಾಗಿ ಪರಿಸರದಲದಲ್ಲಿ ಪ್ರಶಾಂತತೆಯನ್ನು ಪ್ರಸಾದಿಸುತ್ತದೆ. ಇನ್ನು ಸೂರ್ಯಾಸ್ತದ ಸಂದರ್ಭವೂ ಅದ್ಭುತವೇ. ಕಪ್ಪು ಬಣ್ಣದ ಆಗಸದ ಅಲ್ಲಲ್ಲಿ ಮಿನುಗುವ ನಕ್ಷತ್ರಗಳು ಒಂದು ಅನಿರ್ವಚನೀಯ ಅನುಭೂತಿ ನೀಡುತ್ತದೆ.

ಆದರೆ… ನೀವು ಎಂದಾದರೂ ಭೂಮಿ ಮೇಲಿನ ಹಗಲು ಬೆಳಕಿನ ಗಡಿ ರೇಖೆ ನೋಡಿದ್ದೀರಾ..? ಅದ್ಹೇಗೆ ಸಾಧ್ಯ ಎಂದು ಕೇಳಬೇಡಿ.

ಸದ್ಯ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿರುವ ನಾಸಾ ಆಸ್ಟ್ರೋನಾಟ್ ರಾಬರ್ಟ್ ಬೆನಕ್ ಪೋಸ್ಟ್ ಮಾಡಿರುವ ಫೋಟೋ ನೋಡಿದರೇ ಗೊತ್ತಾಗುತ್ತದೆ. ಸೂರ್ಯನ ಸುತ್ತ ತಿರುಗುವಾಗ ಸೂರ್ಯನ‌ ಕಿರಣಗಳು ಒಂದು ಕಡೆಯಿಂದ ಮತ್ತೊಂದು ತಿರುಗುವ ಸಂದರ್ಭದಲ್ಲಿ ಕಿರಣಗಳು ವ್ಯಾಪಿಸುತ್ತವೆ. ಆಗ ಹಗಲು ರಾತ್ರಿಗಳು ಏರ್ಪಡುತ್ತವೆ. ಈ ಸಂಧಿ ಕಾಲದಲ್ಲಿ ರಾಬರ್ಟ್ ಬೆನಕ್ ಐಎಸ್ಎಸ್ ಮೇಲಿಂದ ತೆಗೆದ ಅದ್ಭುತ ಫೋಟೋ ಇದು. ಬೆನಕ್ ಇದನ್ನು ಟ್ವೀಟ್ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

LEAVE A REPLY

Please enter your comment!
Please enter your name here