ವಿಶ್ವೇಶ್ವರ್‌ ಭಟ್‌ ಅವರ ಹೆಸರಿನಲ್ಲಿ ಹರಿದಾಡುತ್ತಿರೋ ಟ್ವೀಟ್‌ ಅಸಲಿನಾ? ನಕಲಿನಾ?

ಹಿರಿಯ ಪತ್ರಕರ್ತರು ಮತ್ತು ವಿಶ್ವವಾಣಿಯ ಸಂಪಾದಕರೂ ಆಗಿರುವ ವಿಶ್ವೇಶ್ವರ ಭಟ್ ಅವರ ಹೆಸರಿನಲ್ಲಿ ಟ್ವೀಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಈ ಟ್ವೀಟ್‌ನಲ್ಲಿ “ನನ್ನ ಓದುಗ ಮತ್ತು ಅಭಿಮಾನಿಗಳ ಗಮನಕ್ಕೆ ಬಿಜೆಪಿಯವರ ರಾಜ್ಯಸಭೆಯ ಸ್ಥಾನದ ಆಮಿಷಕ್ಕೆ ಒಳಗಾದ ನಾನು ಪತ್ರಿಕೋದ್ಯಮ ಸಿದ್ಧಾಂತವನ್ನು ಗಾಳಿಗೆ ತೂರಿ ನನ್ನ ಪತ್ರಿಕೋದ್ಯಮವನ್ನು ಬಿಜೆಪಿ ಮುಖವಾಣಿ ಆಗಿದೆ ಆದರೆ ಸದ್ಯದ ರಾಜ್ಯಸಭಾ ಚುನಾವಣೆಯಲ್ಲಿ ಪಕ್ಷದ ಆಂತರಿಕ ಸ್ಥಿತಿಗತಿಯಲ್ಲಿ ನಿಮಗೆ ಕೊಟ್ಟ ಆಶ್ವಾಸನೆ ಪೂರೈಸಲಾಗುವುದು ಎಂದು ನನಗೆ ಮೋಸವೆಸಗಿದ್ದಾರೆ” ಎಂದು ಬರೆದಿದೆ.

ಇದರ ಬಗ್ಗೆ ಟ್ವಿಟ್ಟರ್‌ನಲ್ಲಿ ತಮ್ಮ ಖಾತೆಯಿಂದ ಸ್ಪಷ್ಟನೆ ಕೊಟ್ಟಿರುವ ವಿಶ್ವೇಶ್ವರ ಭಟ್ ನನ್ನ ಫೋಟೋ ತೆಗೆದು ದುರ್ಬಳಕೆ ಮಾಡಿ ನನ್ನ ವಿರುದ್ಧ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ, ಇದೊಂದು ಸಂಪೂರ್ಣ ನಕಲಿ ಟ್ವೀಟ್‌ ಆಗಿದ್ದು, ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.

ವಿಶ್ವೇಶ್ವರ್‌ ಭಟ್‌ ಅವರು ಟ್ವಿಟ್ಟರ್‌ನಲ್ಲಿ ಹೊಂದಿರುವ ಖಾತೆಯ ಹೆಸರು- @VishweshwarBhat ಆದರೆ ಅವರ ಹೆಸರಿನಲ್ಲಿ ಹರಿದಾಡುತ್ತಿರುವ ಟ್ವೀಟ್‌ ಖಾತೆಯ ಹೆಸರು vishweshwar bhat.

ವಿಶ್ವೇಶ್ವರ್‌ ಅವರ ಖಾತೆಯಲ್ಲಿ ಮೊದಲಾಕ್ಷರ “V” ಯಿಂದ ಆರಂಭವಾಗುತ್ತದೆ.ಆದರೆ ವೈರಲ್‌ ಆಗಿರುವ ಪೋಸ್ಟರ್‌ನಲ್ಲಿ ಮೊದಲಾಕ್ಷರ “v” ಇಂಗ್ಲಿಷಿನ ಸಣ್ಣ ಅಕ್ಷರ. ಇದನ್ನು ನೋಡಿದರೆ, ಮೇಲ್ನೋಟಕ್ಕೆ ವಿಶ್ವೇಶ್ವರ ಭಟ್‌ ಅವರು ಹೊಂದಿರುವ ಖಾತೆಯಿಂದ ಮಾಡಿದ ಪೋಸ್ಟ್‌ ಅಲ್ಲ. ನಕಲಿ ಖಾತೆಯಿಂದ ಯಾರೋ ಮಾಡಿದ್ದಾರೋ ಅಥವಾ ಫೋಟೋಶಾಪ್‌ ಮಾಡಿ ಹರಿಬಿಟ್ಟಿದ್ದಾರೆ ಎನ್ನುವುದು ಧೃಡವಾಗುತ್ತದೆ.

LEAVE A REPLY

Please enter your comment!
Please enter your name here