ವಿಶ್ವದ ಶ್ರೀಮಂತ ಮುಕೇಶ್ ಅಂಬಾನಿಗೂ ಕಂಟಕ

ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿಗೆ ಸಂಕಷ್ಟ ಬಂದರೆಗಿದೆ. ವಿದೇಶದಲ್ಲಿ ಅಕ್ರಮವಾಗಿ ಆದಾಯ ಮತ್ತು ಸಂಪತ್ತನ್ನು ಬಚ್ಚಿಟ್ಟ ಆರೋಪದಡಿ ಆದಾಯ ತೆರಿಗೆ ಇಲಾಖೆ ತನಿಖೆ ತೀವ್ರಗೊಳಿಸಿದೆ. ಅಂಬಾನಿ ಬಚ್ಚಿಟ್ಟಿದ್ದಾರೆ ಎನ್ನಲಾಗಿರುವ ಅಘೋಷಿತ ಆದಾಯ ಮತ್ತು ಆಸ್ತಿಗಳ ಬಗ್ಗೆ ಮಾಹಿತಿಯನ್ನು ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಏಳು ರಾಷ್ಟ್ರಗಳಿಗೆ ಪತ್ರವನ್ನು ಬರೆದಿದೆ.

ಸ್ವಿಟ್ಜರ್ಲೆಂಡ್, ಸೈಂಟ್ ಲೂಸಿಯಾ, ಮಾರಿಸಸ್ ಲಕ್ಸೆಂಬರ್ಗ್ ಅಮೆರಿಕ ಬ್ರಿಟನ್ ಮತ್ತು ಬೆಲ್ಜಿಯಂ ಜೊತೆ ಅಂಬಾನಿ ಕುರಿತ ಮಾಹಿತಿಗಳನ್ನು ಹಂಚಿಕೊಂಡಿದ್ದು 90 ದಿನಗಳಲ್ಲಿ ಮಾಹಿತಿ ಪಡೆಯುವ ನಿರೀಕ್ಷೆಯಲ್ಲಿದೆ. ದ್ವಿ ತೆರಿಗೆ ತಡೆ ಕಾಯ್ದೆ ಮತ್ತು ಅಕ್ರಮ ಹಣ ವರ್ಗಾವಣೆ ಹಾಗೂ ಭಯೋತ್ಪಾದನೆಗೆ ಹಣಕಾಸು ನೆರವು ತಡೆ ಕಾಯ್ದೆಯಡಿ ಈ ಮಾಹಿತಿಗಳನ್ನು ಹಂಚಿಕೊಳ್ಳಲಾಗಿದೆ.

ಕಪ್ಪು ಹಣ ತಡೆ ಕಾಯ್ದೆಯಡಿ ಕ್ಯಾಪಿಟಲ್ ಇನ್ವೆಸ್ತ್ಮೆಂಟ್ ಟ್ರಸ್ಟ್ನನಲ್ಲಿ ಹೂಡಿಕೆ ಹೊಂದಿದ್ದ ಆರೋಪದಡಿ ಇದೇ ವರ್ಷದ ಮಾರ್ಚ್ 28ರಂದು ಐಟಿ ಇಲಾಖೆ ಮುಕೇಶ್ ಅಂಬಾನಿ ಕುಟುಂಬಕ್ಕೆ ನೋಟಿಸ್ ನೀಡಿತ್ತು. ಸೇಮೆನ್ ದೀಪದಲ್ಲಿರುವ ಇನ್ಫಾಸಿಸ್ ಕಂಪನಿ ಲಿಮಿಟೆಡ್ ನಲ್ಲಿ ಹೊಂದಿದ್ದಾರೆ ಎನ್ನಲಾಗಿರುವ ಹೂಡಿಕೆಯ ಬಗ್ಗೆ ಅಂಬಾನಿ ಭಾರತ ಸರ್ಕಾರಕ್ಕೆ ಮಾಹಿತಿ ಕೊಟ್ಟಿಲ್ಲ ಎಂಬ ಆರೋಪ ಕೇಳಿಬಂದಿತ್ತು.

LEAVE A REPLY

Please enter your comment!
Please enter your name here