ವಿಶ್ವಕಪ್‌ ಕ್ರಿಕೆಟ್‌ನಲ್ಲಿ ಭಾರತದ ಸೋಲಿಗೆ ಇವರೇನಾ ಕಾರಣ..? – ಸ್ಫೋಟಕ ಹೇಳಿಕೆ

ಈ ವರ್ಷ ನಡೆದ ಏಕದಿನ ವಿಶ್ವಕಪ್‌ನಲ್ಲಿ ಭಾರತದ ಸೋಲಿಗೆ ಮ್ಯಾನೇಜ್‌ಮೆಂಟ್‌ನ ಗೊಂದಲದ ನಿರ್ಧಾರವೇ ಕಾರಣ ಎಂದು ಗುಡುಗಿದ್ದಾರೆ ಕ್ರಿಕೆಟಿಗ ಯುವರಾಜ್‌ ಸಿಂಗ್‌. ಇಂಗ್ಲೆಂಡ್‌ನಲ್ಲಿ ನಡೆದಿದ್ದ ಮಹಾ ಕಾಳಗದಲ್ಲಿ  ಸೆಮಿಫೈನಲ್‌ನಲ್ಲಿ ೧೮ ರನ್‌ಗಳಿಂದ ಭಾರತ ನ್ಯೂಜಿಲೆಂಡ್‌ ಎದುರು ಸೋಲು ಅನುಭವಿಸಿ ಹೊರದಬ್ಬಲ್ಪಟ್ಟಿತ್ತು.

ಈ ವಿಶ್ವಕಪ್‌ನಲ್ಲಿ ಮ್ಯಾನೇಜ್‌ಮೆಂಜ್‌ ಅಂಬಾಟಿ ರಾಯುಡುರನ್ನು ಆಯ್ಕೆ ಮಾಡಲಿಲ್ಲ. ಬದಲಿಗೆ ಗಾಯಾಳುವಾಗಿದ್ದ ವಿಜಯ್‌ ಶಂಕರ್‌ಗೆ ಅವಕಾಶ ನೀಡಲಾಯಿತು ಮತ್ತು ನಂತರ ರಿಷಭ್‌ ಪಂತ್‌ ಬಂದರು. ಈ ಇಬ್ಬರು ಆಟಗಾರರ ಬಗ್ಗೆ ನನಗೇನು ದ್ವೇಷವಿಲ್ಲ. ಆದರೆ ಇಬ್ಬರೂ ಆಡಿದ್ದು ಐದು ಏಕದಿನ ಪಂದ್ಯಗಳನ್ನಷ್ಟೇ. ಇಷ್ಟೊಂದು ಕಡಿಮೆ ಅನುಭವ ಇರುವ ಆಟಗಾರ ದೊಡ್ಡ ದೊಡ್ಡ ಪಂದ್ಯಗಳನ್ನು ಗೆಲ್ಲಬೇಕು ಎಂದು ನೀವು ಹೇಗೆ ನಿರೀಕ್ಷೆ ಮಾಡುತ್ತೀರಿ..? ಎಂದು ಯುವರಾಜ್‌ ಪ್ರಶ್ನಿಸಿದ್ದಾರೆ.

ಟೀಂ ಇಂಡಿಯಾದ ಮ್ಯಾನೇಜ್‌ಮೆಂಟ್‌ ಏನು ಮಾಡುತ್ತಿತ್ತು..? ವಿಶ್ವಕಪ್‌ ಸರಣಿಯಲ್ಲಿ ದಿನೇಶ್‌ ಕಾರ್ತಿಕ್‌ ಇದ್ದರೂ ಅವರಿಗೆ ಅವಕಾಶ ಸಿಗಲಿಲ್ಲ, ಆದರೆ ದಿಢೀರ್‌ ಆಗಿ ಸೆಮಿಫೈನಲ್‌ನಲ್ಲಿ ಆಡಿಸಿದ್ರಿ. ಧೋನಿಯಂತ ಆಟಗಾರ ನಂಬರ್‌ ೭ನಲ್ಲಿ ಆಡಿದ್ರು. ಎಲ್ಲವೂ ಗೊಂದಲ. ದೊಡ್ಡ ಪಂದ್ಯಗಳಲ್ಲಿ ನೀವು ಹೀಗೆ ಮಾಡಲು ಸಾಧ್ಯವಿಲ್ಲ, ನೀವು ಪಕ್ಕಾ ಆಗಿರಬೇಕು.

ನಂಬರ್‌ ೪ರಲ್ಲಿದ್ದ ಬ್ಯಾಟ್ಸ್‌ಮನ್‌ ಹೈಯೆಸ್ಟ್‌ ಸ್ಕೋರ್‌ ಕೇವಲ ೪೮. ಹೀಗಾಗಿ ನನ್ನ ಪ್ರಕಾರ ಟೀಂ ಇಂಡಿಯಾದ ತಂತ್ರವೇ ಕೆಟ್ಟದಾಗಿತ್ತು. ರೋಹಿತ್‌, ವಿರಾಟ್‌ ಒಳ್ಳೆ ಫಾರ್ಮ್‌ನಲ್ಲಿದ್ದಾರೆ, ಹೀಗಾಗಿ ಗೆಲ್ತೀವಿ ಎಂದ ಲೆಕ್ಕಾಚಾರ ಆಗಿತ್ತು. ಆದ್ರೆ ಆ ರೀತಿ ಎಲ್ಲ ಗೆಲ್ಲಲು ಸಾಧ್ಯವಿಲ್ಲ. ಆಸ್ಟ್ರೇಲಿಯಾವನ್ನು ನೋಡಿ, ೨೦೦೩, ೨೦೧೧, ೨೦೧೫ರಲ್ಲಿ. ಅವರು ಬ್ಯಾಟ್ಸ್‌ಮನ್‌ಗಳನ್ನು ಸೆಟ್‌ ಮಾಡಿದ್ದರು. ಹೀಗಾಗಿ ನನ್ನ ಪ್ರಕಾರ ಟೀಂ ಇಂಡಿಯಾ ತಂತ್ರಗಾರಿಕೆಯೇ ತಪ್ಪಾಗಿತ್ತು.

ರಾಯುಡು ವಿಷಯದಲ್ಲಿ ಏನಾಗಿದ್ಯೋ ಅದರ ಬಗ್ಗೆ ನನಗೆ ನೋವಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ಅವರು ನಂಬರ್‌ ೪ ಬ್ಯಾಟ್ಸ್‌ಮನ್‌ ಆಗಿದ್ದರು. ನ್ಯೂಜಿಲೆಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲೂ ೯೦ ರನ್‌ ಗಳಿಸಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಆಗಿದ್ದರು.

೨೦೦೩ರಲ್ಲಿ ನಾವು ವಿಶ್ವಕಪ್‌ನಲ್ಲಿ ಈ ಹಿಂದಿನ ಸರಣಿಗಳಲ್ಲಿ ಆಡಿದ್ದ ತಂಡವೇ ಇತ್ತು. ನಮ್ಮ ಅನುಭವ ಚೆನ್ನಾಗಿತ್ತು. ನಾನು ಮತ್ತು ಮೊಹಮ್ಮದ್‌ ಕೈಫ್‌ ಜೊತೆಯಾಗಿ ೩೫ ರಿಂದ ೪೦ ಮ್ಯಾಚ್‌ ಆಡಿದ್ವಿ. ನಮ್ಮ ಟಾಪ್‌ ಆರ್ಡರ್‌ ಅಗಾಧ ಅನುಭವ ಪಡೆದಿತ್ತು ಮತ್ತು ಮಧ್ಯಮ ಕ್ರಮಾಂಕದಲ್ಲಿ ಅನುಭವಿ ಆಟಗಾರರಿದ್ದರು ಎಂದು ಯುವರಾಜ್‌ ಸಿಂಗ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here