ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಸ್ಯಾಂಡಲ್‌ ವುಡ್‌ ನ ಕ್ಯೂಟ್‌ ಕಪಲ್ಸ್‌

ಸ್ಯಾಂಡಲ್ ವುಡ್‌ ನ ದೂದ್ ಪೇಡ ಎಂದೇ ಖ್ಯಾತಿಯಾಗಿರುವ ದಿಗಂತ್‌ ಮಂಚಾಲೆ ಮತ್ತು ನಟಿ ಐಂದ್ರಿತಾ ರೇ ಇಂದು ತಮ್ಮ ಮೊದಲನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪತ್ನಿಗೆ ನನ್ನ ಜೀವನದಲ್ಲಿ ನೀನು ನಿಜವಾದ ಸಂತೋಷವನ್ನು ತಂದಿರುವೆ ….ನನ್ನ ಜೀವನವನ್ನು ಪರಿಪೂರ್ಣಗೊಳಿಸಿರುವೆ , ನೀವು ನನ್ನನ್ನು ಪ್ರೀತಿಸುವಷ್ಟು ನಾನು ನಿನ್ನನ್ನು ಪ್ರೀತಿಸಬೇಕೆಂದು ನಾನು ಬಯಸುತ್ತೇನೆ !! ವಾರ್ಷಿಕೋತ್ಸವದ ಶುಭಾಶಯಗಳು ನನ್ನ ಪ್ರೀತಿಯೇ….ಎಂದು ವಿಶ್‌ ಮಾಡಿದ್ದಾರೆ.  

2018 ರ ಡಿಸೆಂಬರ್‌ 12 ರಂದು ನಂದಿಹಿಲ್ಸ್ ನಲ್ಲಿರುವ ರೆಸಾರ್ಟ್‌ನಲ್ಲಿ ಈ ಕ್ಯೂಟ್‌ ಜೋಡಿ ಬಂಗಾಳಿ ಮತ್ತು ಮಲೆನಾಡು ಬ್ರಾಹ್ಮಣರ ಶೈಲಿಯಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 

LEAVE A REPLY

Please enter your comment!
Please enter your name here