ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮ ಇಂದು ೨ ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಪರಸ್ಪರ ಭಾವನಾತ್ಮಕವಾಗಿ ವಿಶ್ ಮಾಡಿಕೊಳ್ಳುವುದರ ಮೂಲಕ ವಿರುಷ್ಕಾ ದಂಪತಿಗಳು ಅಭಿಮಾನಿಗಳ ಮನಗೆದ್ದಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮ ೨೦೧೭ ರ ಡಿಸೆಂಬರ್ ೧೧ ರಂದು ಇಟಲಿಯಲ್ಲಿ ಸಪ್ತಪದಿ ತುಳಿದಿದ್ದರು

ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ಎಂದರೆ  ದೇವರ ಮುಖವನ್ನು ನೋಡುವುದು “-ವಿಕ್ಟರ್ ಹ್ಯೂಗೋ

ಪ್ರೀತಿ ಎಂದರೆ ಅದು ಕೇವಲ ಭಾವನೆ ಅಲ್ಲ, ಅದಕ್ಕಿಂತ ಹೆಚ್ಚು. ನನ್ನ ಮಾರ್ಗದರ್ಶಿ, ಪ್ರೊಪೆಲ್ಲರ್, ಸಂಪೂರ್ಣ ಸತ್ಯದ ಹಾದಿ. ಇವೆಲ್ಲವನ್ನೂ ನಿನ್ನಲ್ಲಿ ಕಂಡುಕೊಂಡಿರುವುದಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಅನುಷ್ಕ ಶರ್ಮ ತಮ್ಮ ೨ ನೇ ವಿವಾಹ ವಾರ್ಷಿಕೋತ್ಸವದ ದಿನದಂದು ಭಾವನಾತ್ಮಕವಾಗಿ ತಮ್ಮ ಪತಿ ವಿರಾಟ್ ಕೊಹ್ಲಿಗೆ  ಶುಭಾಶಯ ಕೋರಿದ್ದಾರೆ. 

LEAVE A REPLY

Please enter your comment!
Please enter your name here