ವಿರಾಟ್ ಕೊಹ್ಲಿ ಫುಲ್ ಗರಂ

ಕಿವೀಸ್ ವಿರುದ್ಧ ಟೆಸ್ಟ್ ಸರಣಿಯನ್ನು 2-0ಯಿಂದ ಕಳೆದುಕೊಂಡ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಪತ್ರಕರ್ತರರ ಮೇಲೆ ಗರಂ ಆಗಿದ್ದಾರೆ. ಪತ್ರಕರ್ತರೊಬ್ಬರು ಕೇಳಿದ ಪ್ರಶ್ನೆಯೊಂದಕ್ಕೆ ವಿರಾಟ್ ಕೊಹ್ಲಿ ತಾಳ್ಮೆ ಕಳೆದುಕೊಂಡಿದ್ದಾರೆ.

ಪತ್ರಕರ್ತ – ವಿರಾಟ್, ಕಿವೀಸ್ ಆಟಗಾರರು ಔಟಾದಾಗ ಮೈದಾನದಲ್ಲಿ ನೀವು ವರ್ತಿಸಿದ ರೀತಿಗೆ ಏನು ಹೇಳುತ್ತೀರಿ..? ಮೈದಾನದಲ್ಲಿ ಹೇಗೆ ಇರಬೇಕೆಂದು ಗೊತ್ತಿಲ್ಲವಾ ನಿಮಗೆ..?

ಕೊಹ್ಲಿ – ನೀವೇನು ಅಂದುಕೊಳ್ಳುತ್ತಿದ್ದೀರಿ..?

ಪತ್ರಕರ್ತ – ನಾನು ಪ್ರಶ್ನೆ ಮಾಡಿರುವುದು ನಿಮಗೆ..

ಕೊಹ್ಲಿ – ನಾನು ಕೂಡ ನಿಮಗೆ ಪ್ರಶ್ನೆ ಕೇಳುತ್ತಿರುವುದು..

ಪತ್ರಕರ್ತ – ನೀವು ಮೈದಾನದಲ್ಲಿ ಸರಿಯಾದ ವರ್ತನೆ ತೋರಬೇಕಿತ್ತು..

ಕೊಹ್ಲಿ – ಅಲ್ಲಿ ನಡೆದಿದ್ದೇನು ಎಂಬ ಬಗ್ಗೆ ಪೂರ್ತಿ ತಿಳಿದುಕೊಂಡು ಬರಬೇಕಿತ್ತು. ಅಪೂರ್ಣ ಮಾಹಿತಿಯೊಂದಿಗೆ ಇಲ್ಲಿ ಬಂದು ಮಾತನಾಡಬಾರದು. ಒಂದು ವೇಳೆ ನೀವು ವಿವಾದ ಸೃಷ್ಟಿಸಬೇಕು ಎಂದುಕೊಂಡಿದ್ದರೇ ಇದು ಸರಿಯಾದ ವೇದಿಕೆ ಅಲ್ಲ. ಈ ವಿಷಯದ ಬಗ್ಗೆ ನಾನು ರೆಫರಿ ಜೊತೆ ಮಾತನಾಡಿದ್ದೇನೆ. ಅಲ್ಲಿ ನಡೆದ ಘಟನೆ ಬಗ್ಗೆ ರೆಫರಿಗೆ ಯಾವುದೇ ಅಪಸ್ವರವಿಲ್ಲ.ಧನ್ಯವಾದಗಳು..

ಅಂದ ಹಾಗೇ, ಭಾರತ ಸರಣಿ ಸೋತ ಸಂದರ್ಭಗಳಲ್ಲಿ ಈ ಹಿಂದೆಯೂ ಪತ್ರಕರ್ತರ ಮೇಲೆ ವಿರಾಟ್ ಕೊಹ್ಲಿ ಗರಂ ಆಗಿದ್ದ ಉದಾಹರಣೆಗಳಿವೆ. 2018ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ಸೋತಾಗಲೂ, ಇತ್ತೀಚಿಗೆ ವೆಲ್ಲಿಂಗ್ಟನ್ ಟೆಸ್ಟ್ ಸೋತಾಗಲೂ ಕೊಹ್ಲಿ ಕೋಪಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

LEAVE A REPLY

Please enter your comment!
Please enter your name here