ವಿದ್ಯಾರ್ಥಿಗಳ ಮುಂದೆ ಆರ್ಥಿಕತೆ ಬಗ್ಗೆ ಮಾತನಾಡುವ ಧೈರ್ಯ ಮೋದಿಗೆ ಇದ್ಯಾ..? ರಾಹುಲ್ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ಯಾವುದಾದರೂ ವಿಶ್ವವಿದ್ಯಾಲಯಕ್ಕೆ ಹೋಗಿ ಕುಸಿದಿರುವ ಆರ್ಥಿಕತೆಯ ಬಗ್ಗೆ ವಿದ್ಯಾರ್ಥಿಗಳೆದುರು ಮಾತನಾಡಲಿ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

ಸಿಎಎ ಮತ್ತು ಎನ್ ಆರ್ ವಿರುದ್ಧ ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ನೇತೃತ್ವದಲ್ಲಿ ನಡೆದ 20 ವಿರೋಧಪಕ್ಷಗಳ ಸಭೆಯ ಬಳಿಕ ರಾಹುಲ್ ಗಾಂಧಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ವಿಶ್ವವಿದ್ಯಾಲಯಗಳಲ್ಲಿ ಯುವಕರ ಎದುರು ಎದ್ದುನಿಂತು ದೇಶದ ಆರ್ಥಿಕತೆ ಯಾಕೆ ಕುಸಿದಿದೆ ಎಂದು ಪ್ರಧಾನಿ ಮೋದಿ ಮಾತನಾಡುವ ಧೈರ್ಯ ತೋರಬೇಕು. ಪ್ರಧಾನಿ ಮೋದಿಗೆ ಆ ತಾಕತ್ತಿಲ್ಲ. ದೇಶಕ್ಕಾಗಿ ಪ್ರಧಾನಿ ಏನು ಮಾಡುತ್ತಾರೆ ಎಂಬುದನ್ನು ಜನತೆಯ ಮುಂದೆ ತಿಳಿಸಲಿ ಎಂದು ಸವಾಲು ಹಾಕುತ್ತೇನೆ ಎಂದು ರಾಹುಲ್ ಹೇಳಿದ್ದಾರೆ.

ಯುವಜನತೆಯ ಹೋರಾಟ ನ್ಯಾಯಯುತವಾಗಿದೆ ಅದನ್ನು ಕೇಳಬೇಕು ಎಂದು ರಾಹುಲ್ ಹೇಳಿದ್ದಾರೆ

LEAVE A REPLY

Please enter your comment!
Please enter your name here