ವಿದೇಶದದಲ್ಲಿರುವ ಭಾರತೀಯರು ದನದ ಮಾಂಸ ತಿನ್ನುತ್ತಾರೆ – ಮೋದಿ ಸರ್ಕಾರದ ಸಚಿವ

ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಸಚಿವ ಗಿರಿರಾಜ್‌ ಸಿಂಗ್‌ ಹೊಸದೊಂದು ವಿವಾದಿತ ಹೇಳಿಕೆ ನೀಡಿದ್ದಾರೆ. ವಿದೇಶದಲ್ಲಿರುವ ಭಾರತೀಯರು ದನದ ಮಾಂಸ ತಿನ್ನುತ್ತಾರೆ ಎಂದು ಬೆಗುಸರೈನ ಬಿಜೆಪಿ ಸಂಸದ ವಿವಾದಿತ ಹೇಳಿಕೆ ಕೊಟ್ಟಿದ್ದಾರೆ.

ಮಿಷನರಿ ಶಾಲೆಗಳಿಗೆ ಹೋಗುವ ವಿದ್ಯಾರ್ಥಿಗಳು ಪಾಸಾಗಿ ಐಐಟಿಗೆ ಹೋಗುತ್ತಾರೆ ನಿಜ, ಆದರೆ ವಿದೇಶಕ್ಕೆ ಹೋದ ಮೇಲೆ ದನದ ಮಾಂಸ ತಿನ್ನುತ್ತಾರೆ. ಯಾಕೆಂದ್ರೆ ಅವರಿಗೆ ಸಂಸ್ಕಾರವಾಗಲೀ ಅಥವಾ ಸಂಸ್ಕೃತಿ ಆಗಲಿ ಇಲ್ಲ. ನಂತರ ಅವರ ಪೋಷಕರು ತಮ್ಮ ಮಕ್ಕಳು ನೋಡಿಕೊಳ್ಳಲ್ಲ ಎಂದು ದೂರುತ್ತಾರೆ ಎಂದು ಗಿರಿರಾಜ್‌ ಹೇಳಿದ್ದಾರೆ.

ಖಾಸಗಿ ಶಾಲೆಗಳಲ್ಲೂ ಭಗವದ್ಗೀತೆಯ ಶ್ಲೋಕ ಪಠಣವನ್ನು ಕಡ್ಡಾಯಗೊಳಿಸಬೇಕು. ಸರ್ಕಾರಿ ಶಾಲೆಗಳಲ್ಲಿ ನಾವು ಕಡ್ಡಾಯಗೊಳಿಸಿದರೆ ಕೇಸರಿಕರಣ ಮಾಡುತ್ತಿದ್ದಾರೆ ಎಂದು ದೂರುತ್ತಾರೆ ಎಂದು ಗಿರಿರಾಜ್‌ ಸಿಂಗ್‌ ಹೇಳಿದ್ದಾರೆ.

LEAVE A REPLY

Please enter your comment!
Please enter your name here