ವಾಹ್‌ ಟಬೂಬಿಯಾ..!

ಚಳಿಗಾಲ ಈಗಾಗಲೇ ಆರಂಭವಾಗಿದೆ, ಮೈಸೂರು ನಗರದಲ್ಲಿ ಮಹಾರಾಣಿ ಕಾಲೇಜ್, ಓವೆಲ್‌ ಗ್ರೌಂಡ್ ಸೇರಿದಂತೆ ನಗರದ ತುಂಬೆಲ್ಲಾ ಗುಲಾಬಿ ಬಣ್ಣದ ಟಬೂಬಿಯಾ ಅವಲಂಡೆ ಹಾಗೂ ತಿಳಿ ಗುಲಾಬಿ ಬಣ್ಣದ ಟಬೂಬಿಯಾ ರೋಜಿಯಾ ಹೂವುಗಳು ಅರಳಿದ್ದು, ಮೈಸೂರಿನ ಸೌಂದರ್ಯವನ್ನು ಇಮ್ಮಡಿಸಿವೆ.

ನಗರದ ಹಲವು ರಸ್ತೆ ಬದಿಗಳಲ್ಲೂ ಕಂಗೊಳಿಸುತ್ತಿರುವ ಈ ಹೂವುಗಳ ಸೊಬಗು ನೋಡುಗರ ಮನಸ್ಸನ್ನು ಆಹ್ಲಾದಗೊಳಿಸುತ್ತಿವೆ.

ಚಿತ್ರಗಳು: ಆಶಿತ್‌ ಚೌಟ

ಉದ್ಯಾನಗಳಲ್ಲಿ ವಾಯುವಿಹಾರ ಮಾಡುವವರು ತಂಪಾದ ಗಾಳಿಯ ಜತೆಗೆ ಮನಮೋಹಕ ಹೂವುಗಳ ಅಂದವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಹಲವರು ಹೂಬಿಟ್ಟ ಮರದ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮ ಪಡುತ್ತಿದ್ದಾರೆ.

ಅಮೇರಿಕಾ ಮೂಲದ ಈ ಟಬೂಬಿಯಾದ ವೈಜ್ಞಾನಿಕ ಹೆಸರು ಬಿಗ್ನೋನಿಯೇಷಿ. ಒಂದು ಬಾರಿ ಹೂ ಬಿಟ್ಟರೆ ಕನಿಷ್ಟ ಒಂದರಿಂದ ಒಂದೂವರೆ ತಿಂಗಳ ಕಾಲ ಕಾಣಸಿಗುತ್ತದೆ.

LEAVE A REPLY

Please enter your comment!
Please enter your name here