ವಲಸೆ ಕಾರ್ಮಿಕರ ಜೊತೆ ರಾಹುಲ್ ಸಂವಾದ‌: ಕಾಂಗ್ರೆಸ್‌ನಿಂದ ಡಾಕ್ಯುಮೆಂಟರಿ ಬಿಡುಗಡೆ

ಕಾಂಗ್ರೆಸ್ ಪಕ್ಷದ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ವಲಸೆ ಕಾರ್ಮಿಕರ ಜತೆ ಸಂವಾದ ನಡೆಸಿದ ವಿಡಿಯೋವನ್ನು ಕಾಂಗ್ರೆಸ್ ಪಕ್ಷ ಡಾಕ್ಯುಮೆಂಟರಿ ರೂಪದಲ್ಲಿ ಶನಿವಾರ ಬಿಡುಗಡೆಗೊಳಿಸಿದೆ.

ದೆಹಲಿಯ ಆಗ್ನೇಯ ಭಾಗದಲ್ಲಿರುವ ಸುಖ ದೇವಿ ವಿಹಾರ್ ಬಳಿ ಬೀಡು ಬಿಟ್ಟಿರುವ ಕಾರ್ಮಿಕರನ್ನು ರಾಹುಲ್ ಗಾಂಧಿಯವರು ಮಾತನಾಡಿಸಿರುವ 17 ನಿಮಿಷಗಳ ವಿಡಿಯೋವನ್ನು ಬಿಡುಗಡೆಗೊಳಿಸಲಾಗಿದೆ.

ಹರಿಯಾಣದಿಂದ ಉತ್ತರಪ್ರದೇಶದ ಜಾನ್ಸಿ ಸಮೀಪದಲ್ಲಿರುವ ತಮ್ಮ ಊರುಗಳಿಗೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಈ ವಲಸೆ ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ರಾಹುಲ್ ಗಾಂಧಿ ಅವರೊಂದಿಗೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಕಾರ್ಮಿಕರು ತಮಗೆ ಪ್ರಯಾಣದ ಸೌಕರ್ಯವನ್ನು ಕಲ್ಪಿಸುವಂತೆ ಮನವಿ ಮಾಡಿದ್ದರು.

ಶನಿವಾರ ಬಿಡುಗಡೆಗೊಂಡಿರುವ ಈ ಡಾಕ್ಯುಮೆಂಟರಿಯಲ್ಲಿ ಕೆಲಸ ಕಳೆದುಕೊಂಡು ಭಯದಿಂದ ಊರಿಗೆ ತೆರಳುತ್ತಿರುವ ವಲಸೆ ಕಾರ್ಮಿಕರ ಸಂಕಷ್ಟಗಳನ್ನು ಸೆರೆಹಿಡಿಯಲಾಗಿದೆ.

ವೀಡಿಯೋ ವೀಕ್ಷಿಸಲು ಈ ಕೆಳಗಿನ ಲಿಂಕ್‌ ಮೇಲೆ ಕ್ಲಿಕ್‌ ಮಾಡಿ:

youtube.com/rahulgandhi

LEAVE A REPLY

Please enter your comment!
Please enter your name here