ವರ್ಷ ಕಳೆದರೂ ಪುಲ್ವಾಮಾ ದಾಳಿಗೆ ಸಿಗದ ಸಾಕ್ಷ್ಯ – ಆರೋಪಿಗೆ ಜಾಮೀನು ಮಂಜೂರು

೪೦ ಮಂದಿ ಭಾರತೀಯ ಯೋಧರನ್ನು ಬಲಿ ಪಡೆದಿದ್ದ ಪುಲ್ವಾಮಾ ಭಯೋತ್ಪಾದಕ ದಾಳಿಯ ಆರೋಪಿಗೆ ದೆಹಲಿಯ ಎನ್‌ಐಎ ಕೋರ್ಟ್‌ ಜಾಮೀನು ನೀಡಿದೆ. ನಿಗದಿತ ಅವಧಿಯೊಳಗೆ ಆರೋಪಪಟ್ಟಿ ಸಲ್ಲಿಸಲು ರಾಷ್ಟ್ರೀಯ ತನಿಖಾ ದಳ ವಿಫಲವಾದ ಹಿನ್ನೆಲೆಯಲ್ಲಿ ಆರೋಪಿ ಯೂಸುಫ್‌ ಚೋಹಾನ್‌ಗೆ ಜಾಮೀನು ಸಿಕ್ಕಿದೆ.

ದಾಳಿಗೆ ಸಂಬಂಧಿಸಿದಂತೆ ಅಗತ್ಯ ಸಾಕ್ಷ್ಯಗಳು ಇನ್ನೂ ಸಿಗದಿರುವ ಹಿನ್ನೆಲೆಯಲ್ಲಿ ಆರೋಪಪಟ್ಟಿ ಸಲ್ಲಿಸಲು ಸಾಧ್ಯವಾಗಿಲ್ಲ ಎಂದು ಕೋರ್ಟ್‌ಗೆ ಎನ್‌ಐಎ ಮಾಹಿತಿ ನೀಡಿದೆ.

180 ದಿನಗಳಿಂದ ಯೂಸುಫ್‌ ಎನ್‌ಐಎ ಕಸ್ಟಡಿಯಲ್ಲಿದ್ದು, ಆರೋಪಪಟ್ಟಿ ಸಲ್ಲಿಸಲು ತನಿಖಾ ದಳಕ್ಕಿದ್ದ ಅವಧಿ ಇದೇ ಫೆಬ್ರವರಿ 11, ರಂದು ಮುಗಿದುಹೋಗಿತ್ತು. ಈ ಹಿನ್ನೆಲೆಯಲ್ಲಿ ಯೂಸುಫ್‌ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದರು.

ಫೆಬ್ರವರಿ 14, 2019ರಂದು ಆರ್‌ಡಿಎಕ್ಸ್‌ನ್ನು ತುಂಬಿದ್ದ ಕಾರು ಸಿಆರ್‌ಪಿಎಫ್‌ ಯೋಧರು ತೆರಳುತ್ತಿದ್ದ ಬಸ್‌ಗೆ ಡಿಕ್ಕಿ ಹೊಡೆದ ಸ್ಫೋಟ ನಡೆದಿತ್ತು. ಈ ಭಯೋತ್ಪಾದಕ ದಾಳಿಯಲ್ಲಿ ೪೦ ಮಂದಿ ಸೈನಿಕರು ಹುತಾತ್ಮರಾಗಿದ್ದರು. ಇದಾದ ಬಳಿಕ ವೀಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಉಗ್ರ ಸಂಘಟನೆ ಜೈಶ್‌ ಇ ಮೊಹ್ಮದ್‌ ದಾಳಿಯ ಹೊಣೆ ಹೊತ್ತಿಕೊಂಡಿತ್ತು.

LEAVE A REPLY

Please enter your comment!
Please enter your name here