ವರಾಹ ರೂಪಂ ಹಾಡಿಗೆ ರೀಲ್ಸ್; ಧರ್ಮಸ್ಥಳ ಕ್ಷೇತ್ರದಲ್ಲಿ ತಪ್ಪೊಪ್ಪಿಗೆ ಕಾಣಿಕೆ ಹಾಕಿದ ಯುವತಿ

ಬೆಳ್ತಂಗಡಿ: ಕಾಂತಾರ ಚಿತ್ರದ ಪಂಜುರ್ಲಿ ದೈವದ ರೀಲ್ಸ್ ಮಾಡಿ ಇನ್ ಸ್ಟ್ರಾ ಗ್ರಾಂನಲ್ಲಿ ಹಾಕಿದ್ದ ಯುವತಿ ತನ್ನ ತಪ್ಪಿನ ಅರಿವಾಗಿ ಇದೀಗ ಧರ್ಮಸ್ಥಳ ಕ್ಷೇತ್ರದಲ್ಲಿ ತಪ್ಪೊಪ್ಪಿಗೆ ಕಾಣಿಕೆ ಹಾಕಿದ್ದಾಳೆ.

ಹೈದರಾಬಾದ್ ಮೂಲದ ಮೇಕಪ್ ಆರ್ಟಿಸ್ಟ್ ಶ್ವೇತಾ ಎಸ್.ರೆಡ್ಡಿ ಅವರು ಕಾಂತಾರ ಚಿತ್ರದಲ್ಲಿರುವಂತೆ ವೇಷ ಹಾಕಿ ಪೇಜ್ ನಲ್ಲಿ ಹಂಚಿಕೊಂಡಿದ್ದಳು. ತುಳುನಾಡಿನ ನಂಬಿಕೆಯ ದೈವ ಪಂಜುರ್ಲಿಯ ರೀಲ್ಸ್ ವೈರಲ್ ಆಗುತ್ತಿದ್ದಂತೆ ಇದರ ವಿರುದ್ದ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧ ವ್ಯಕ್ತವಾಗಿತ್ತು.

ಇದೀಗ ಆಕೆ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಆಗಮಿಸಿ ದೇವಸ್ಥಾನದಲ್ಲಿ ತಪ್ಪೊಪ್ಪಿಗೆ ಕಾಣಿಕೆ ಹಾಕಿದ್ದಾಳೆ ಡಾ.ಡಿ.ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಕ್ಷಮೆ ಕೇಳಿದ್ದಾಳೆ.

ಇನ್ನೂ ಬೆಂಗಳೂರು ಮೂಲದ ಶ್ವೇತಾ ರೆಡ್ಡಿ ಎಂಬ ಯುವತಿ ಮೇಕಪ್ ಆರ್ಟಿಸ್ಟ್ ಆಗಿದ್ದು, ಕಾಂತಾರ ಸಿನಿಮಾ ನೋಡಿದ ಮೇಲೆ ಪಂಜುರ್ಲಿ ದೈವದ ವೇಷಭೂಷಣ ಹಾಕಿ ಸಿನಿಮಾದ ವರಹಾ ರೂಪಂ ಹಾಡಿಗೆ ರೀಲ್ಸ್ ಮಾಡಿದ್ದರು. ನಂತರ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದರು. ವಿಡಿಯೋ ನೋಡಿದ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.

ಶ್ವೇತಾ ಟಿಕೇಗೆ ಗುರಿಯಾಗಿ ವಿಡಿಯೋ ಡಿಲಿಟ್ ಮಾಡಿದ್ದರು. ಪಂಜುರ್ಲಿ ದೈವದ ರಿಲ್ಸ್ ಮಾಡಿದ್ದಕ್ಕೆ ಕ್ಷಮೆಕೋರಿ ಮುಂದೆ ಯಾವುದೇ ತೊಂದರೆ ಆಗದಿರಲಿ ಎಂದು ತಪ್ಪು ಕಾಣಿಕೆ ಹಾಕಿದ್ದಾರೆ. ಯಕ್ಷಗಾನ ಇದೆಲ್ಲವೂ ಒಂದೇ ಎಂದು ಅಂದುಕೊಂಡು ತನ್ನಿಂದ ತಪ್ಪಾಯಿತೆಂದು ಕ್ಷಮೆಯಾಚಿಸಿದ್ದಾರೆ.

LEAVE A REPLY

Please enter your comment!
Please enter your name here