ವನ್ಯಜೀವಿಗಳ ಅದ್ಭುತ ದೃಶ್ಯಗಳು.. ಮಿಸ್ ಮಾಡ್ಕೋಬೇಡಿ.. ನೋಡಿ

ಆನೆಯೊಂದು ಮನೆಯ ಬಾಗಿಲು ತಟ್ಟಿದರೇ ಹೇಗಿರುತ್ತೆ..? ಇದೇನು ಪ್ರಶ್ನೆ ಅಂತಾ ಕೇಳಬೇಡಿ. ಇದು ನಿಜಕ್ಕೂ ನಡೆದಿದೆ. ಎಲ್ಲಿ ಅಂತೀರಾ.. ಕೇರಳದ ಇಡುಕ್ಕಿ ಜಿಲ್ಲೆಯ ಎರವಿಕುಲಮ್ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯ ಹಳ್ಳಿಯೊಂದರಲ್ಲಿ. ಲಾಕ್‍ಡೌನ್‍ನಿಂದ ಎಲ್ಲರೂ ಮನೆಯಲ್ಲಿ ಇದ್ದಾರೋ..? ಇಲ್ಲವೋ ಎಂಬುದನ್ನು ಚೆಕ್ ಮಾಡುವ ಸಲುವಾಗಿಯೋ ಎಂಬಂತೆ ಆನೆ ಮನೆಗೆ ನುಗ್ಗಲು ಯತ್ನಿಸಿದೆ ನೋಡಿ.

ಜಂಪ್ ಮಾಡುತ್ತಾ ನಾಡಿಗೆ ಬಂತು ಕಾಂಗರೂ..

ಕೊರೋನಾ ಕಾರಣದಿಂದ ಆಸ್ಟ್ರೇಲಿಯಾದ ಆಡಿಲೇಡ್ ನಗರ ಈಗ ನಿರ್ಮಾನುಷವಾಗಿದೆ. ಹೀಗಾಗಿ ಜಿಗಿಯುತ್ತಾ ಜಿಗಿಯುತ್ತಾ ಕಾಂಗರೂ ಒಂದು ನಗರ ಪ್ರದಕ್ಷಿಣೆ ಮಾಡಿದೆ.

ಆಕ್ಲೆಂಡ್‍ನಲ್ಲಿ ಪೆಂಗ್ವಿನ್ ಚೆಕ್

ನ್ಯೂಜಿಲೆಂಡ್ ದೇಶದ ಆಕ್ಲೆಂಡ್‍ನಲ್ಲಿ ಮೂರು ಪೆಂಗ್ವಿನ್‍ಗಳು ಮನುಷ್ಯರು ಯಾರಾದರೂ ಇದ್ದಾರಾ ಎಂಬುದನ್ನು ಚೆಕ್ ಮಾಡಲೆಂಬಂತೆ ನಗರವನ್ನು ಸುತ್ತಿವೆ.

ಮರಿ ರೈನ್ಹೋಗೆ ತನ್ನ ಫ್ರೆಂಡ್ಸ್ ಭೇಟಿ ಮಾಡಿಸಿದ ತಾಯಿ ರೈನ್ಹೋ

ಕಾಡಿನ ಪ್ರಪಂಚವೇ ಅದ್ಭುತ.. ಮರಿ ರೈನ್ಹೋಸರ್‍ಗೆ ತಾಯಿ ರೈನ್ಹೋಸರ್ ತನ್ನ ಗೆಳೆಯರಾದ ಚಿಂಕೆ, ಜಿರಾಫೆಯನ್ನು ಭೇಟಿ ಮಾಡಿಸಿದೆ.

ಗಲ್ಲಿಯಲ್ಲಿ ಕಾಣಿಸಿಕೊಂಡ ಚಿಪ್ಪು ಹಂದಿ

ಜಾರ್ಖಂಡ್ ರಾಜ್ಯದ ಜಮ್ತಾರಾ ಜಿಲ್ಲೆಯ ಹಳ್ಳಿಯೊಂದಕ್ಕೆ ಅಪರೂಪದ ಅತಿಥಿ ಭೇಟಿ ಕೊಟ್ಟಿದೆ.. ಅದೇ ಚಿಪ್ಪು ಹಂದಿ.

ಇನ್ನೂ ಹಲವು ವಿಶೇಷ ಮತ್ತು ರಮಣೀಯ ದೃಶ್ಯಗಳನ್ನು ನೋಡಿ

 

LEAVE A REPLY

Please enter your comment!
Please enter your name here