ಲೋಕಾರ್ಪಣೆಯಾಯಿತು ಪ್ರಪಂಚದ ಅತೀ ದೊಡ್ಡ ಕೋವಿಡ್ ಚಿಕಿತ್ಸಾಲಯ

ಕೇಂದ್ರ ಗೃಹ ಸಚಿವಾಲಯದ ಸಹಾಯದೊಂದಿಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ಥಾಪಿಸಲಾಗಿದ ನೂತನ ‘ಸರ್ದಾರ್ ವಲ್ಲಭಭಾಯಿ ಪಟೇಲ್ ಕೋವಿಡ್ ಆಸ್ಪತ್ರೆ’ ಇಂದು ಲೋಕಾರ್ಪಣೆ ಗೊಂಡಿದೆ.

ಪ್ರಪಂಚದಲ್ಲೇ ಅತಿದೊಡ್ಡ ಕೋವಿಡ್ ಚಿಕಿತ್ಸಾಲಯ ಇದಾಗಿದ್ದು, 10 ಸಾವಿರ ಹಾಸಿಗೆಗಳ ಸಾಮರ್ಥ್ಯ ಹೊಂದಿದೆ.

ದೆಹಲಿ-ಹರಿಯಾಣ ಗಡಿ ಸಮೀಪವಿರುವ ಛತ್ತರ್‌ಪುರ ಪ್ರದೇಶದಲ್ಲಿ ನಿರ್ಮಾಣ ಮಾಡಲಾಗಿರುವ ಈ ಆಸ್ಪತ್ರೆಯನ್ನು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಉದ್ಘಾಟಿಸಿದ್ದು, ಈ ಬೃಹತ್ ಆಸ್ಪತ್ರೆ ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ ವಿಸ್ತೀರ್ಣವಿದೆ. 200 ಕೊಠಡಿಗಳನ್ನು ಹೊಂದಿದ್ದು, ತಲಾ 50 ಹಾಸಿಗೆಗಳಿವೆ.

ಇನ್ನು ಏಕಕಾಲದಲ್ಲಿಯೇ 10,000 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿರುವ ಈ ಆಸ್ಪತ್ರೆಯಲ್ಲಿ 1,000 ವಿಶೇಷ ತೀವ್ರ ನಿಗಾ ಘಟಕದ ಬೆಡ್‌ಗಳು ಹಾಗೂ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯನ್ನು ಮಾಡಲಾಗಿದೆ.

LEAVE A REPLY

Please enter your comment!
Please enter your name here