ಲಾಕ್ ಡೌನ್ ವೇಳೆಯಲ್ಲೂ ಮಗನ ಮೊದಲ ಬರ್ತ್ ಡೇಯನ್ನು ವಿಶಿಷ್ಟವಾಗಿ ಆಚರಿಸಿ ಸುದ್ದಿಯಾದ ರಿಶಬ್‌ ಶೆಟ್ಟಿ

ಸ್ಯಾಂಡಲ್ ವುಡ್‌ ಪ್ರತಿಭಾವಂತ ನಟ,ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ ತಮ್ಮ ಸಿನಿಮಾಗಳನ್ನು ಕ್ರಿಯೇಟಿವ್ ಆಗಿ ಮಾಡಿ ಜನರ ಮನ ಗೆಲ್ಲುತ್ತಾರೆ. ಆದರೆ ಈಗ ಲಾಕ್ ಡೌನ್ ವೇಳೆಯಲ್ಲೂ ಮಗನ ಮೊದಲ ಬರ್ತ್ ಡೇಯನ್ನು ವಿಶಿಷ್ಟವಾಗಿ ಆಚರಿಸಿ ಸುದ್ದಿಯಾಗಿದ್ದಾರೆ.

ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿಯವರ ಮಗ ರನ್ವಿತ್ ಶೆಟ್ಟಿ ಮೊನ್ನೆಯಷ್ಟೇ ಮೊದಲ ವರ್ಷಕ್ಕೆ ಕಾಲಿಟ್ಟಿದ್ದಾನೆ. ಲಾಕ್ ಡೌನ್ ಎಂದು ಮಗನ ಬರ್ತ್ ಡೇಯನ್ನು ಆಚರಿಸಿಕೊಳ್ಳದೇ ಇರಲು ಸಾಧ‍್ಯವೇ?

ಸದ್ಯಕ್ಕೆ ತವರೂರಿನಲ್ಲಿ ಬೀಡುಬಿಟ್ಟಿರುವ ರಿಷಬ್ ಪಕ್ಕಾ ಕರಾವಳಿ ಶೈಲಿಯಲ್ಲಿ ಬರ್ತ್ ಡೇ ಸೆಟ್ ಹಾಕಿ ಸಂಭ್ರಮಾಚರಿಸಿದ್ದಾರೆ. ಸುತ್ತ ಹಲಸಿನ ಹಣ್ಣು, ಎಳೆ ನೀರಿನ ಗೊಂಚಲು, ತೆಂಗಿನ ಗರಿ ಇರಿಸಿ ಬರ್ತ್ ಡೇ ಸೆಟ್ ಅಪ್ ಮಾಡಿದ್ದು, ಪತ್ನಿ, ಹಾಗೂ ಕುಟುಂಬ ಸದಸ್ಯರ ಜತೆಗೂಡಿ ಬರ್ತ್ ಡೇ ಆಚರಿಸಿದ್ದಾರೆ.‌

    ಪತ್ನಿ ಪ್ರಗತಿ ಶೆಟ್ಟಿ ಮತ್ತು ಮಗ ರನ್ವಿತ್‌ ಜೊತೆ ರಿಶಬ್‌ ಶೆಟ್ಟಿ

ಹೋಮ್‌ ಮೇಡ್‌ ಕೇಕ್‌ 

ಹಾಳೆಯ ಮುಟ್ಟಾಳೆಯನ್ನು ಬರ್ತ್ ಡೇ ಕ್ಯಾಪ್‌ ಆಗಿ ಧರಿಸಿರುವ ರನ್ವಿತ್‌ ಶೆಟ್ಟಿ

     ಸುರುಳಿಯಾಕಾರದ ಕಣ್ಸೆಳೆಯುವ ತೆಂಗಿನ ಗರಿಯಿಂದ ಮಾಡಲ್ಪಟ್ಟ ಕಲಾಕೃತಿ

ತೀರಾ ಅಪರೂಪವಾಗಿ ಕಾಣಲ್ಪಡುವ ಹಿಂದಿನ ಕಾಲದ ಗ್ಯಾಸ್‌ ಲೈಟ್‌

                       ತಾಮ್ರದ ಹಳೆಯ ಹಂಡೆಯ ಮೇಲೆ ಅಲಂಕಾರಕ್ಕೆಂದು ಇರಿಸಲಾದ ಕಾಡಿನ ಹೂವುಗಳು

                                           ಮಗನ ಹುಟ್ಟುಹಬ್ಬದ ನೆನಪಿಗಾಗಿ ಒಂದು ಸೆಲ್ಫಿ

‘ಮುದ್ದುಕಂದ ರಣ್ವಿತ್‌ನ ಮೊದಲ ವರ್ಷದ ಹುಟ್ಟುಹಬ್ಬ. ಕೊರೊನಾ ಕಾರಣದಿಂದ ಯಾವುದೇ ಆಡಂಬರ ಇಲ್ಲದೇ, ನಾ ಹುಟ್ಟಿ ಬೆಳೆದ ಮನೆಯಲ್ಲಿ ಹಳ್ಳಿ ಸೊಗಡಿನ ಅಲಂಕಾರ ತೆಂಗು,ಅಡಿಕೆಯ ಹಿಂಗಾರ, ನಡುವೆ ಬಾಳೆಯ ಸಿಂಗಾರ.. ಅಲ್ಲಲ್ಲಿ ಕಾಡಿನ ಹೂ ಹಣ್ಣುಗಳ ಸುಗಂಧ,ಮೊದಲ ಮಳೆಯ ಸಂಭ್ರಮದಲ್ಲಿ ನಮ್ಮ ಕೆಲವೇ ಪ್ರೀತಿಪಾತ್ರರ ಜೊತೆ ಆಚರಿಸಲಾಯಿತು… ನಿಮ್ಮೆಲ್ಲರ ಪ್ರೀತಿ ತುಂಬಿದ ಹಾರೈಕೆ ನನ್ನ ಮುದ್ದುಮಗನ ಮೇಲಿರಲಿ’ ಎಂದು ಬರೆದುಕೊಂಡಿದ್ದಾರೆ

ಇದೀಗ ಈ ಫೋಟೋಗಳು ಈಗ ವೈರಲ್ ಆಗಿದ್ದು, ಇನ್ನು ಮುಂದೆ ಬರ್ತ್ ಡೇ ಆಚರಿಸಿಕೊಳ‍್ಳುವವರಿಗೂ ಹೊಸ ಐಡಿಯಾ ಕೊಟ್ಟಿದೆ.

LEAVE A REPLY

Please enter your comment!
Please enter your name here