ಲಾಕ್ ಡೌನ್ ನಡುವೆಯೇ ನೆರವೇರಿದ ಸ್ಯಾಂಡಲ್ ವುಡ್‌ ಯುವರಾಜನ ಅದ್ಧೂರಿ ವಿವಾಹ

ಎಚ್‌.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಹಾಗೂ ರೇವತಿ ಬಿಡದಿ ಬಳಿಯ ಕೇತಗಾನಹಳ್ಳಿಯ ಫಾರ್ಮ್ ಹೌಸ್‌ನಲ್ಲಿ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತೋಟದ ಮನೆಯ ಮುಂಭಾಗ ಮದುವೆಗೆಂದೇ ವಿಶೇಷವಾಗಿ ಮಂಟಪ ನಿರ್ಮಿಸಲಾಗಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಚನ್ನಮ್ಮ ದಂಪತಿ ಮದುವೆ ಧಾರೆ‌ ಕಾರ್ಯ ನಡೆಸಿಕೊಟ್ಟರು.

ದೇವೇಗೌಡರು, ಚೆನ್ನಮ್ಮ, ಅನಿತಾ ಕುಮಾರಸ್ವಾಮಿ, ಕುಮಾರಸ್ವಾಮಿ ಸೇರಿದಂತೆ ರೇವತಿ ಪಾಲಕರಾದ ಮಂಜುನಾಥ ದಂಪತಿ ಹಾಗೂ ಎರಡೂ ಕುಟುಂಬದ ಆಪ್ತರಷ್ಟೇ ಪಾಲ್ಗೊಂಡಿದ್ದರು.

1 COMMENT

LEAVE A REPLY

Please enter your comment!
Please enter your name here