ಲಾಕ್ ಡೌನ್ ಉದ್ದೇಶ ವಿಫಲವಾಗಿದೆ ಮುಂದಿನ ಯೋಜನೆ ಏನು? ಸರ್ಕಾರಕ್ಕೆ ರಾಹುಲ್ ಪ್ರಶ್ನೆ

ದೇಶದಲ್ಲಿ ಕೊರೊನಾ ವೈರಸ್ ಸೋಂಕು ಗಣನೀಯವಾಗಿ ಹೆಚ್ಚುತ್ತಿದ್ದು, ಮುಂಬರುವ ದಿನಗಳಲ್ಲಿ ಕೊರನಾ ವೈರಸ್ ನಿಯಂತ್ರಿಸಲು ಕೇಂದ್ರ ಸರ್ಕಾರದ ಯೋಜನೆ ಏನು ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ವಿಫಲವಾದ ಲಾಕ್ ಡೌನ್ ಪರಿಣಾಮವನ್ನು ಭಾರತವೀಗ ಎದುರಿಸುತ್ತಿದೆ. ಈಗ ನಿಮ್ಮ ಯೋಜನೆಯೇನು ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ರಾಹುಲ್ ಪ್ರಶ್ನಿಸಿದ್ದಾರೆ.

2 ತಿಂಗಳ ಹಿಂದೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಕೋರೋನಾ ವಿರುದ್ಧ ನಾವು 21 ದಿನಗಳಲ್ಲಿ ಹೋರಾಡಿ ಗೆಲ್ಲುತ್ತೇವೆ ಎಂದು ಹೇಳಿದ್ದರು. ಈಗಾಗಲೇ 60 ದಿನಗಳು ಕಳೆದಿವೆ. ಕೋರೋನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಲಾಕ್‌ ಡೌನ್‌ ತೆರವುಗೊಳಿಸುತ್ತಿರುವ ವಿಶ್ವದ ಏಕೈಕ ರಾಷ್ಟ್ರ ಭಾರತವಾಗಿದೆ ಎಂದು ರಾಹುಲ್‌ ಕಿಡಿಕಾರಿದ್ದಾರೆ.

ದೇಶದಲ್ಲಿ ದಿನೇ ದಿನೇ ಕೊರೋನಾ ಸೋಂಕಿನ ಪ್ರಮಾಣ ಏರಿಕೆಯಾಗುತ್ತಿದೆ ಮತ್ತು ನಾವು ಲಾಕ್‌ ಡೌನ್‌ ತೆರವುಗೊಳಿಸಿದ್ದೇವೆ. ಇದನ್ನು ನೋಡಿದರೆ ಲಾಕ್‌ ಡೌನ್ ಉದ್ದೇಶ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ. 4 ಹಂತಗಳಲ್ಲಿ ಲಾಕ್ ಡೌನ್ ಮಾಡಿದ್ದರೂ ಪ್ರಧಾನಮಂತ್ರಿ ನಿರೀಕ್ಷಿಸಿದ ಫಲಿತಾಂಶ ತಂದುಕೊಟ್ಟಿಲ್ಲ.

ಲಾಕ್‌ಡೌನ್‌ನಿಂದ ನಿರುದ್ಯೋಗ ಸಮಸ್ಯೆಯನ್ನು ಹೆಚ್ಚಿಸಿದ್ದು, ವಲಸೆ ಕಾರ್ಮಿಕರಿಗೆ ಯಾವ ರೀತಿಯ ಸಹಾಯ ನೀಡಲಾಗುತ್ತಿದೆ ರಾಜ್ಯ ಸರ್ಕಾರಗಳು ಮತ್ತು ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಹೇಗೆ ಬೆಂಬಲ ನೀಡುತ್ತಿದೆ,ಕೊರೋನವನ್ನು ಹತೋಟಿಗೆ ತರಲು ಸರಕಾರ ಏನು ಮುಂಜಾಗೃತ ಕ್ರಮ ಕೈಗೊಳ್ಳುತ್ತಿದೆ ಎಂದು ರಾಹುಲ್ ಪ್ರಶ್ನಿಸಿದ್ದಾರೆ.

LEAVE A REPLY

Please enter your comment!
Please enter your name here