ಲಾಕ್‍ಡೌನ್ 2 – ಮೋದಿ ಭಾಷಣ ವೀಕ್ಷಿಸಿದ್ದೆಷ್ಟು ಮಂದಿ?

ಕೊರೋನಾ ನಿಯಂತ್ರಣ ಸಲುವಾಗಿ ದೇಶಾದ್ಯಂತ ಕೊರೋನಾ ವಿಸ್ತರಣೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಮಾಡಿದ ಭಾಷಣವನ್ನು ಬರೋಬ್ಬರಿ 20.3 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ ಬ್ರಾಡ್‍ಕಾಸ್ಟ್ ಆಡಿಯನ್ಸ್ ರಿಸೆರ್ಚ್ ಕೌನ್ಸಿಲ್ (ಬಾರ್ಕ್) ತಿಳಿಸಿದೆ.

ಏಪ್ರಿಲ್ 14ಂದು ಬೆಳಗ್ಗೆ 10 ಗಂಟೆಗೆ ದೇಶವನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಎರಡನೇ ಹಂತದ ಲಾಕ್‍ಡೌನ್ ಜಾರಿ ಮಾಡಲಾಗುತ್ತದೆ ಎಂದು ತಿಳಿಸಿದ್ದರು.

ಕೊರೋನಾ ಸಂಬಂಧ ಪ್ರಧಾನಿಗಳು ಇದುವರೆಗೂ ನಾಲ್ಕು ಬಾರಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೊದಲ ಮೂರು ಬಾರಿ ಜನತಾ ಕಫ್ರ್ಯೂ, 21 ದಿನಗಳ ಲಾಕ್‍ಡೌನ್,ವೈದಯಕೀಯ ಸಿಬ್ಬಂದಿಗೆ ಬೆಂಬಲ ನೀಡಲು ದೀಪ ಬೆಳಗಿಸಿ ಎಂದು ಈ ಮೊದಲು ನರೇಂದ್ರ ಮೋದಿ ಕರೆ ನೀಡಿದ್ದರು.

21 ದಿನಗಳ ಲಾಕ್‍ಡೌನ್ ಘೋಷಿಸಿ ಮೋದಿ ಮಾಡಿದ್ದ ಭಾಷಣವನ್ನು ದೇಶಾದ್ಯಂತ 19.3 ಕೋಟಿ ಮಂದಿ ವೀಕ್ಷಣೆ ಮಾಡಿದ್ದರು.

19 ದಿನಗಳ ಲಾಕ್‍ಡೌನ್ ಘೋಷಣೆ ಮಾಡುವ ಮೋದಿ ಭಾಷಣವನ್ನು 20.3 ಕೋಟಿ ಮಂದಿ ವೀಕ್ಷಣೆ ಮಾಡಿದ್ದಾರೆ. ಇದನ್ನು 199 ವಾಹಿನಿಗಳು ಪ್ರಸಾರ ಮಾಡಿದ್ದವು. ಲಾಕ್‍ಡೌನ್ ಅವಧಿಯಲ್ಲಿ ಟಿವಿ ವೀಕ್ಷಕರ ಸಂಖ್ಯೆ ಶೇ.38ರಷ್ಟು ಹೆಚ್ಚಾಗಿದೆ.

ಇನ್ನು ಕ್ಲಾಸಿಕ್ ಸೀರಿಯಲ್‍ಗಳಾದ ಮಹಾಭಾರತ, ರಾಮಾಯಣ ಮರುಪ್ರಸಾರದ ಮೂಲಕ ದೂರದರ್ಶನ, ಖಾಸಗಿ ವಾಹಿನಿಗಳಿಗೆ ಸೆಡ್ಡು ಹೊಡೆಯುತ್ತಿದೆ.

ಅಷ್ಟೇ ಅಲ್ಲ, ಪ್ರಧಾನಿ ನರೇಂದ್ರ ಮೋದಿ ಕರೆಗೆ ಸ್ಪಂದಿಸಿದ ಜನತೆ, ಆರೋಗ್ಯ ಸೇತು ಆಪ್ಲಿಕೇಶನ್ ಅನ್ನು ದಾಖಲೆ ಮಟ್ಟಕ್ಕೆ ಡೌನ್‍ಲೋಡ್ ಮಾಡಿಕೊಂಡಿದ್ದಾರೆ ಎಂದು ಎಸಿ ನೀಲ್ಸನ್ ತಿಳಿಸಿದೆ. ಆದರೆ, ಆ್ಯಪ್ ಡೌನ್‍ಲೋಡ್ ಮಾಡಿಕೊಂಡವರ ಪೈಕಿ ಶೇಕಡಾ 10ರಷ್ಟು ಮಂದಿ ಮಾತ್ರ ಅದನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ.

ಸ್ಮಾರ್ಟ್‍ಫೋನ್ ಬಳಕೆದಾರರಲ್ಲಿ ಶೇ.40ರಷ್ಟು ಮಂದಿ, ಕೊರೋನಾ ಕುರಿತ ಅಪ್‍ಡೇಟ್‍ಗಾಗಿ ಗೂಗಲ್ ಸರ್ಚ್ ಮಾಡುತ್ತಿದ್ದಾರೆ.

LEAVE A REPLY

Please enter your comment!
Please enter your name here