ಲಾಕ್‍ಡೌನ್ ಮುಂದುವರೆಯಬೇಕಾ ಬೇಡ್ವಾ.? ಪಿಎಂ ಸಭೆಯಲ್ಲಿ ಮುಖ್ಯಮಂತ್ರಿಗಳ ಮಾತೇನು?

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಅಂತ್ಯ .ಮೇ 03ರ ನಂತರವೂ ಕೊರೋನಾ ಲಾಕ್‍ಡೌನ್ ಮುಂದುವರೆಸಬೇಕೋ ಬೇಡವೋ ಎನ್ನುವ ಬಗ್ಗೆ ಮುಖ್ಯಮಂತ್ರಿಗಳ ಅಭಿಪ್ರಾಯವನ್ನು ನರೇಂದ್ರ ಮೋದಿ ಸಂಗ್ರಹಿಸಿದ್ದಾರೆ. ನಿರ್ಧಾರದ ಚೆಂಡು ಈಗ ಪ್ರಧಾನಿ ಅಂಗಳದಲ್ಲಿದೆ.

* ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ – ರಾಷ್ಟ್ರೀಯ ಲಾಕ್‍ಡೌನ್ ಮುಂದುವರೆಸಿ.. ಆದರೆ, ರಾಜ್ಯದೊಳಗೆ ಪ್ರಮುಖ ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ನೀಡಿ. ಧಾರ್ಮಿಕ ಆಚರಣೆಗಳು, ಸಾರ್ವಜನಿಕ ಕಾರ್ಯಕ್ರಮಗಳಿಗೆ ಇನ್ನೂ ಕೆಲವು ದಿನ ಅವಕಾಶ ನೀಡಬಾರದು

* ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ – ಮುಂಜಾಗ್ರತಾ ಕ್ರಮಗಳೊಂದಿಗೆ ವಾಣಿಜ್ಯ ಮತ್ತು ವ್ಯಾಪಾರ ವಹಿವಾಟು ಆರಂಭಿಸಲು ಅವಕಾಶ ನೀಡಬೇಕು

* ಹಿಮಾಚಲ ಪ್ರದೇಶ ಮುಖ್ಯಮಂತ್ರಿ ಜೈರಾಮ್ ಠಾಕೂರ್ – 12 ಜಿಲ್ಲೆಗಳಲ್ಲಿ ಕೊರೋನಾ ಸೋಂಕು ಇಲ್ಲ. ಆರ್ಥಿಕ ಚಟುವಟಿಕೆ ಆರಂಭಿಸಲು ನಾವು ಸಜ್ಜಾಗಿದ್ದೇವೆ. ಇದಕ್ಕೆ ಹಣಕಾಸು ನೆರವು ನೀಡಿ. ಇತರೆ ರಾಜ್ಯಗಳ ಅಭಿಪ್ರಾಯಗಳನ್ನು ಪರಿಗಣಿಸಿ ತೀರ್ಮಾನ ಮಾಡಿ

* ಮೇಘಾಲಯ ಮುಖ್ಯಮಂತ್ರಿ ಕಾನ್ರಾಡ್ ಸಂಗ್ಮಾ – ಮೇ 3ರ ಬಳಿಕವೂ ಲಾಕ್‍ಡೌನ್ ವಿಸ್ತರಿಸಿ.. ಅಂತರ್ ರಾಜ್ಯ, ಅಂತರ್ ಜಿಲ್ಲೆ ನಡುವಣ ಸಂಚಾರಕ್ಕೆ ಅವಕಾಶ ಬೇಡ

* ಮಿಜೋರಾಮ್ ಮುಖ್ಯಮಂತ್ರಿ ಜೋರಂತಂಗಾ – ಕೇಂದ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಲು ಸಿದ್ದವಿದ್ದೇವೆ.

* ಪುದುಚ್ಚೆರಿ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ – ಪಿಪಿಇ ಕಿಟ್ ಒದಗಿಸಿ, ವೈದ್ಯಕೀಯ ಸವಲತ್ತು ಹೆಚ್ಚು ಮಾಡಿ ಕೋವಿಡ್ ವಿರುದ್ಧ ಹೋರಾಡಲು, ಕೈಗಾರಿಕೆಗಳ ಪುನಶ್ಚೇತನಕ್ಕೆ ಹಣಕಾಸು ನೆರವು ನೀಡಿ.

* ಕರ್ನಾಟಕ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ- ವಲಯವಾರು ವಿಂಗಡಿಸಿ ಕ್ರಮ ಕೈಗೊಳ್ಳುತ್ತೇವೆ. ಸೋಂಕು‌ ಹರಡದಂತೆ ಎಲ್ಲಾ ಕ್ರಮ ಕೈಗೊಂಡಿದ್ದೇವೆ.ಮುಂದೆಯೂ ಅದನ್ನು ಮುಂದುವರಿಸುತ್ತೇವೆ.ಮೇ ೧೫ ರವರೆಗೂ ಲಾಕ್ ಡೌನ್ ಮುಂದುವರಿಸಬೇಕಾಗಬಹುದು. ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ಕೊಡುವುದಿಲ್ಲ.

ರಾಜ್ಯದ  ಅಭಿಪ್ರಾಯಕ್ಕೆ ತಕ್ಷಣಕ್ಕೆ ಪ್ರಧಾನಿ ಕಡೆಯಿಂದ ಯಾವುದೇ ಉತ್ತರ ಸಿಕ್ಕಿಲ್ಲ.

LEAVE A REPLY

Please enter your comment!
Please enter your name here