ಲಾಕ್‍ಡೌನ್ ಟೈಮಲ್ಲಿ ಜಾಲಿ ರೇಡ್.. ಕನ್ನಡದ ಖ್ಯಾತ ನಟಿಯ ಕಾರು ಅಪಘಾತ..!

ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಜನಸಾಮಾನ್ಯ ಪೊಲೀಸರ ಕೈಗೆ ಸಿಕ್ಕಿಬಿದ್ರೆ ವೆರೈಟಿ ವೆರೈಟಿ ಶಿಕ್ಷೆಯನ್ನು ಅನುಭವಿಸಬೇಕಾಗುತ್ತೆ.

ಆದರೆ, ಸೆಲೆಬ್ರಿಟಿಗಳ ವಿಚಾರದಲ್ಲಿ ಪೊಲೀಸರು ಇದೇ ರೂಲ್ಸನ್ನು ಫಾಲೋ ಮಾಡ್ತಾರಾ..?

ಇಂದು ನಸುಕಿನ ಜಾವ ಬೆಂಗಳೂರಿನ ವಸಂತನಗರ ಬಳಿ ಕನ್ನಡದ ನಾಯಕ ನಟಿ ಶರ್ಮಿಳಾ ಮಾಡ್ರೆ ಅವರಿದ್ದ  ಜಾಗ್ವಾರ್ ಕಾರು ಅಪಘಾತಕ್ಕೀಡಾಗಿದೆ. ಲಾಕ್‍ಡೌನ್ ಟೈಮಲ್ಲಿ ಸ್ನೇಹಿತರ ಜೊತೆ ಜಾಲಿ ರೆಡ್ ಹೋಗಿದ್ದ ಸಂದರ್ಭದಲ್ಲಿ ಈ ಅನಾಹುತ ಸಂಭವಿಸಿದೆ.

ಅಗತ್ಯ ಮತ್ತು ತುರ್ತು ಸೇವೆಗಳಿಗೆ ಪೊಲೀಸರು ನೀಡುವ ಪಾಸ್ ಬಳಸಿ ಜಾಲಿ ರೇಡ್‍ಗೆ ಬಂದಿರುವುದು ಜಾಗ್ವಾರ್ ಕಾರ್ ಮೇಲಿನ
ಸ್ಟಿಕ್ಕರ್‍ನಿಂದ ಬಯಲಾಗಿದೆ.

ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿರುವ ನಟಿ ಶರ್ಮಿಳಾ ಮಾಂಡ್ರೆ ನಗರ ಖ್ಯಾತ ಆಸ್ಪತ್ರೆ ಒಂದರಲ್ಲಿ ಚಿಕಿತ್ಸೆ ಪಡೆದು ರಹಸ್ಯ ಸ್ಥಳದಲ್ಲಿ ಇದ್ದಾರೆ ಎನ್ನಲಾಗುತ್ತಿದೆ. ಪ್ರಭಾವಿಗಳ ಮೂಲಕ ಒತ್ತಡ ಹೇರಿ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

LEAVE A REPLY

Please enter your comment!
Please enter your name here